ರಾಷ್ಟ್ರೀಯ

ಮಡದಿಗೆ ಮನೆಗೆಲಸ ಹಚ್ಚುವುದು ತಪ್ಪೆ? ಹೈಕೋರ್ಟ್ ತೀರ್ಪು ಕುತೂಹಲ!

ಸರಕಾರ್ ನ್ಯೂಸ್ ಮುಂಬೈ

“ಮದುವೆಯಾದ ಹೊಸತರಲ್ಲಿ ಪತಿಯ ಕುಟುಂಬಸ್ಥರು ತನ್ನನ್ನು ಚೆನ್ನಾಗಿಯೇ ನೋಡಿಕೊಂಡರು, ಆದರೆ ಬರಬರುತ್ತಾ ಮನೆಗೆಲಸದವಳಂತೆ ಕಾಣತೊಡಗಿದರು. ಜೊತೆಗೆ ಕಾರು ಖರೀದಿಗೆ ಹಣ ತರುವಂತೆ ಬೇಡಿಕೆ ಇರಿಸಿ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಮಡೆಸಿದರು” ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿವಾಹಿತೆಗೆ ನ್ಯಾಯಾಲಯ ಶಾಕ್ ಕೊಟ್ಟಿದೆ.

ಹೌದು, ಇಂಥದ್ದೊಂದು ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ನ ಔರಂಗಬಾದ್ ಪೀಠ “ತನ್ನ ಕುಟುಂಬಕ್ಕಾಗಿ ಮನೆಗೆಲಸ ಮಾಡುವಂತೆ ವಿವಾಹಿತೆಯನ್ನು ಒತ್ತಾಯಿಸುವುದು ಕ್ರೌರ್ಯವಲ್ಲ ಜೊತೆಗೆ ಮನೆಗೆಲಸ ಮಾಡು ಎನ್ನುವುದು ವಿವಾಹಿತೆಯನ್ನು ಮನೆಗೆಲಸದವರಿಗೆ ಹೋಲಿಸಿದಂತೆ ಅಲ್ಲ” ಎಂದು ಹೇಳಿದ್ದಲ್ಲದೇ ಮಹಿಳೆ ಸಲ್ಲಿಸಿದ್ದ ಎಫ್ ಐಆರ್ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿಭಾ ಕಂಕನವಾಡಿ ಹಾಗೂ ರಾಜೇಶ ಪಾಟೀಲ ಅವರು ಈ ಪ್ರಕರಣದ ವಿಚಾರಣೆ ನಡೆಸಿದ್ದು”ಮಹಿಳೆಯು ದೂರಿನಲ್ಲಿ ದೌರ್ಜನ್ಯವಾಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ ಯಾವ ರೀತಿಯ ದೌರ್ಜನ್ಯವಾಗಿದೆ ಎಂದು ವಿವರಿಸಿಲ್ಲ ” ಎಂದು ಅಭಿಪ್ರಾಯಿಸಿದ್ದಾರೆ.

ಮಹಿಳೆಯು ಆಕೆಯ ಪತಿ ಕುರಿತು ಮಾಡಿದ ಆರೋಪವು ಸೆಕ್ಷನ್ 498 ಎ ಅಡಿ ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಾಲಯ ಎಫ್ ಐಆರ್ ರದ್ದು ಮಾಡಬೇಕು ಎಂದು ವಿವಾಹಿತೆಯ ಪತಿ ಮತ್ತು ಆತನ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು.

error: Content is protected !!