ನಮ್ಮ ವಿಜಯಪುರ

ಕೋರ್ಟ್ ಹಾಲ್ ನಲ್ಲೇ ಕತ್ತು ಕೊಯ್ದುಕೊಂಡ ಆರೋಪಿ, ಬ್ಲೇಡ್ ಎಲ್ಲಿಂದ ಬಂತು ಎಂಬುದೇ ಯಕ್ಷಪ್ರಶ್ನೆ

ಸರಕಾರ ನ್ಯೂಸ್ ವಿಜಯಪುರ

ವಿಜಯಪುರ: ಕೋರ್ಟ್ ಆವರಣದಲ್ಲಿಯೇ ಬ್ಲೇಡ್ ನಿಂದ ಕುತ್ತಿಗೆ ಕೊಯ್ದು ಕೊಂಡ ಘಟನೆ ನಡೆದಿದೆ.

ಇಲ್ಲಿನ ಬಾಗಲಕೋಟೆ ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

ಶಿವಾನಂದ ಹೊಸಮನಿ ಎಂಬಾತ ಕತ್ತು ಕುಯ್ದುಕೊಂಡ ಆರೋಪಿ. ಹಲವು ಕೇಸ್‌ಗಳಲ್ಲಿ ಆರೋಪಿಯಾಗಿದ್ದ ಶಿವಾನಂದ ಮೇಲೆ ನ್ಯಾಯಾಲಯದ ವಾರಂಟ್ ಸಹ ಇತ್ತು‌‌. ನಗರದ ಕೆ‌.ಇ.ಬಿ ಬಳಿ ಈತನನ್ನು
ಬಂಧಿಸಿದ ಪೊಲೀಸರು ಬಳಿಕ ನೇರವಾಗಿ ನ್ಯಾಯಾಧೀಶರ ಎದುರು ಹಾಜರು ಪಡಿಸಲು ಜಿಲ್ಲಾನ್ಯಾಯಾಲಯಕ್ಕೆ ಕರೆತಂದಿದ್ದರು. ಈ ವೇಳೆ ಏಕಾಏಕಿ ಶಿವಾನಂದ ಕತ್ತು ಕೊಯ್ದುಕೊಂಡಿದ್ದಾನೆ.

ತಕ್ಷಣವೇ ಸ್ಥಳದಲ್ಲಿದ್ದ ಜನರಿಂದ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಬಳಿ ಬ್ಲೇಡ್ ಹೇಗೆ ಬಂತು ಎನ್ನುವ ಬಗ್ಗೆ ಅನುಮಾನ ಪೊಲೀಸರನ್ನು ಕಾಡುತ್ತಿದೆ.

Leave a Reply

Your email address will not be published. Required fields are marked *

error: Content is protected !!