ಲಂಚಬಾಕ ಎಫ್ ಡಿಸಿ ಎಸಿಬಿ ಬಲೆಗೆ, ಶಿಕ್ಷಣ ಇಲಾಖೆಗೆ ಇದು ಕಪ್ಪು ಚುಕ್ಕೆ, ಬಂಧಿತ ಅಧಿಕಾರಿ ಯಾರು ಗೊತ್ತೆ?
ಸರಕಾರ್ ನ್ಯೂಸ್ ವಿಜಯಪುರ
ಪ್ರಮೋಶನ್ ಆಗಿದ್ದ ಸಿಬ್ಬಂದಿ ಯನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇರಿಸಿದ್ದ ಪ್ರಥಮ ದರ್ಜೆ ಸಹಾಯಕನೋರ್ವ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಇಲ್ಲಿನ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಪ್ರಥಮ ದರ್ಜೆ ಸಹಾಯಕ ವಿನೋದ ರಾಠೋಡ ಎಸಿಬಿ ಬಲೆಗೆ ಬಿದ್ದ ಸಿಬ್ಬಂದಿ.
ಪ್ರಮೋಶನ್ ಆಗಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಲು ವಿನೋದ 5000 ರೂ.ಗಳಿಗೆ ಬೇಡಿಕೆ ಇರಿಸಿದ್ದನು. ಇದರಿಂದ ಬೇಸತ್ತ ಸಿಬ್ಬಂದಿ ಎಸಿಬಿಗೆ ದೂರು ನೀಡಿದ್ದರು.
ಬುಧವಾರ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ಸಾಕ್ಷ ಸಮೇತ ಬಂಧಿಸಿದ್ದಾರೆ.