ಶಾಸಕ ಯತ್ನಾಳಗೆ ಶಿವಾನಂದ ಪಾಟೀಲ ಪಂಥಾಹ್ವಾನ, ನಗರ ಕ್ಷೇತ್ರದಿಂದ ನಾನು ಸ್ಪರ್ಧೆಗೆ ಸಿದ್ದ, ಯಾರು ಗೆಲ್ತಾರೋ ನೋಡೋಣ ಬನ್ನಿ…!
ಸರಕಾರ್ ನ್ಯೂಸ್ ವಿಜಯಪುರ
ನಾನು ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಾಗಿದ್ದೇನೆ. ಬಿಜೆಪಿ, ಅಥವಾ ಕಾಂಗ್ರೆಸ್ ನಿಂದ ಸ್ಪರ್ಧೆಗೂ ಸಿದ್ಧ. ನಾನು ಗೆಲ್ತಿನೋ ಅವ್ರು ಗೆಲ್ಲುತ್ತಾರೆ ಎನ್ನುವುದು ಜನ ತೀರ್ಮಾನ ಮಾಡಿದ್ಮೇಲೇ ಮಾತನಾಡೋದು ಒಳ್ಳೆಯದು ಎಂದು ಶಾಸಕ ಶಿವಾನಂದ ಪಾಟೀಲ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ ಹರಿಹಾಯ್ದಿದ್ದಾರೆ.
ನಾನು ಚಿಲ್ಲರೆ ರಾಜಕಾರಣ ಮಾಡಲ್ಲ. ಶಾಸಕ ಯತ್ನಾಳ ದುರುದ್ದೇಶದಿಂದ ಮೇಲಿಂದ ಮೇಲೆ ಮಾತನಾಡೋದು ಸರಿಯಲ್ಲ. ನಾನು ಪಕ್ಷಕ್ಕೆ ಅಂಟಿಕೊಂಡು ರಾಜಕಾರಣ ಮಾಡಿದವ ಅಲ್ಲ. ಯತ್ನಾಳ್ ಸ್ವ ಪ್ರೇರಣೆಯಿಂದ ಮಾತನಾಡ್ತಿಲ್ಲ. ಯಾರೋ ಅವರಿಗೆ ಪ್ರೋ ಓಕ್ ಮಾಡ್ತಿದ್ದಾರೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಈವರೆಗೆ ನಾನು ಅವರ ಉಸಾಬರಿ ಮಾಡಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ, ಶಾಸಕ ಶಿವಾನಂದ ಪಾಟೀಲಗೆ ಬ್ಲ್ಯಾಕ್ ಮೇಲ್ ಮಾಡುವ ಚಟ ಇದೆ. ಬಿಜೆಪಿಯಿಂದ ಸ್ಪರ್ಧೆ ಮಾಡ್ತೀನಿ ನಾನು. ಅವನೇನು ಕೇಳಬೇಕು ನಾನು ಎಂದರು. ಅಲ್ಲದೇ,
ಅವನಿಗೆ ಬ್ಲ್ಯಾಕ್ ಮೇಲ್ ಮಾಡುವ ಚಟ ಇದ್ದು, ಎಂ.ಬಿ. ಪಾಟೀಲ್ ಗೆ ಬ್ಲ್ಯಾಕ್ ಮೇಲ್ ಮಾಡಿದಂಗೆ ನನಗೆ ಮಾಡೋಕೆ ಆಗಲ್ಲ ಎಂದರು.