ನಮ್ಮ ವಿಜಯಪುರ

ಸವದತ್ತಿ ಜಾತ್ರೆಯಿಂದ ಬರುವಷ್ಟರಲ್ಲಿ ಮನೆಗಳ್ಳತನ, ಚಿನ್ನಾಭರಣ-ನಗದು ದೋಚಿ ಪರಾರಿ

ಸರಕಾರ್‌ ನ್ಯೂಸ್‌ ವಿಜಯಪುರ

ಸವದತ್ತಿ ಜಾತ್ರೆಗೆ ಹೋಗಿ ಬರುವುದರೊಳಗಾಗಿ ಮನೆಯಲ್ಲಿ ಕಳ್ಳತನ ನಡೆದ ಪ್ರಕರಣ ವಿಜಯಪುರದ ಪದ್ಮನಗರ ಕಾಲನಿಯಲ್ಲಿ ನಡೆದಿದೆ.

ಶಂಕರ ಮಲ್ಲಪ್ಪ ತೋಂಟಾಪುರ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

ನ. 21ರಂದು ಮನೆಯವರೆಲ್ಲರೂ ಸೇರಿ ಸವದತ್ತಿ ಯಲ್ಲಮ್ಮನ ಜಾತ್ರೆಗೆ ತೆರಳಿದ್ದಾರೆ. ಅಂದು ಮಧ್ಯಾಹ್ನ 3ರಿಂದ ನ. 22ರ ಬೆಳಗಿನ ಜಾವದೊಳಗೆ ಕಳ್ಳತನ ನಡೆದಿದೆ. ಜಾತ್ರೆ ಮುಗಿಸಿಕೊಂಡು ಬರುವಷ್ಟರಲ್ಲಿ ಈ ಕೃತ್ಯ ನಡೆದಿದೆ. ಮನೆಯ ಹಿಂಬಾಗಿಲಿನ ಕೀಲಿ ಮುರಿದು ಒಳಗೆ ನುಗ್ಗಿರುವ ಕಳ್ಳರು ದೇವರ ಪೂಜಾ ಕೋಣೆಯಲ್ಲಿದ್ದ ಸುಮಾರು 12.5 ಗ್ರಾಂ ಬಂಗಾರದ ಬೊರಮಾಳ, 6 ಗ್ರಾಂನ ಬಂಗಾರದ ಜೀರಾಮಣಿ ಸರ, 45 ಸಾವಿರ ರೂಪಾಯಿ ಮತ್ತು ಹಾಲ್‌ ಕಬೋರ್ಡ್‌ನಲ್ಲಿದ್ದ 15 ಗ್ರಾಂ ಬಂಗಾರದ ಸರ ಹೀಗೆ ಒಟ್ಟು 100500 ರೂ. ಮೌಲ್ಯದ 33.5 ಗ್ರಾಂ ಬಂಗಾರ ಹಾಗೂ 45 ಸಾವಿರ ರೂಪಾಯಿ ಹಣ ಕಳವು ಮಾಡಲಾಗಿದೆ. ಈ ಬಗ್ಗೆ ನ. 23ರಂದು ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಮಾಡಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!