ನಮ್ಮ ವಿಜಯಪುರ

ಹಿರೇಮಸಳಿ ವಿದ್ಯಾರ್ಥಿಗಳ ಹಿರಿಮೆ, ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸರಕಾರ್ ನ್ಯೂಸ್ ಇಂಡಿ

ತಾಲೂಕಿನ ಹಿರೇಮಸಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹಿರಿಯರ ವಿಭಾಗದ ಕ್ಲೇ ಮಾಡಲಿಂಗ್‌ನಲ್ಲಿ ಶಿವಕುಮಾರ ಶಿಳ್ಳೆನವರ, ಚಿತ್ರಕಲೆ ವಿಭಾಗದಲ್ಲಿ ಮಹಾದೇವಿ ಮಾದರ, ಪದ್ಮವೇಷದಲ್ಲಿ ಮಯೂರಿ ಹಿಪ್ಪರಗಿ ಹಾಗೂ ಕಿರಿಯರ ಚಿತ್ರಕಲೆ ವಿಭಾಗದಲ್ಲಿ ಸೌಮ್ಯ ಮರಡಿ ಆಯ್ಕೆಯಾಗಿದ್ದಾರೆ.

ಶಾಲೆ ಮುಖ್ಯ ಗುರು ಆನಂದ ಕೆಂಭಾವಿ, ಸಹ ಶಿಕ್ಷಕಿ ಬಿ.ಕೆ. ಪಟ್ಟಣಶೆಟ್ಟಿ. ಪಿ.ಆರ್. ಪಾಂಡ್ರೆ. ಸಂಗಮೇಶ .ಬಿ.ಸಿ, ಪ್ರಕಾಶ ಹೋಳಿನ್, ಸಿ.ಎಸ್. ಬೆಡಗೆ, ಆರ್.ಟಿ. ತಳವಾರ ಮತ್ತಿತರರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!