ನಮ್ಮ ವಿಜಯಪುರ

ಲಾರಿ ಕ್ಯಾಬಿನ್‌ನಲ್ಲಿದ್ದ 10 ಲಕ್ಷ ರೂಪಾಯಿ ಗಾಯಾಬ್‌, ಸಂಡಾಸಕ್ಕೆ ಹೋಗಿ ಬರುವಷ್ಟರಲ್ಲಿಯೇ ಹಣ ಎಗರಿಸಿದ ಭೂಪರು !!!

ಸರಕಾರ ನ್ಯೂಸ್‌ ವಿಜಯಪುರ

ಲಾರಿ ನಿಲ್ಲಿಸಿ ಸಂಡಾಸಕ್ಕೆ ಹೋಗಿ ಬರುವುದರಲ್ಲಿಯೇ ಕ್ಯಾಬಿನ್‌ನಲ್ಲಿದ್ದ 10 ಲಕ್ಷ ರೂಪಾಯಿ ಎಗರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಶಿವಣಗಿ ದಾಟಿ ಸುಮಾರು 1 ಕಿಮೀ ಅಂತರದಲ್ಲಿ ವಿಜಯಪುರ ಕಡೆಗೆ ಬರುವ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿ ನಂ. ಕೆಎ-28, ಎಎ-6404ರಲ್ಲಿದ್ದ ಹಣ ಎಗರಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದ ನಿವಾಸಿ ಗೌಸಮೋದಿನ ಶಾನೋಲ ಬೇಪಾರಿ ಎಂಬುವರು ಬಾಗಲಕೋಟೆ, ವಿಜಯಪುರ ಮತ್ತಿತರ ಭಾಗಗಳಲ್ಲಿ ದನದ ವ್ಯಾಪಾರ ಮಾಡಿಕೊಂಡಿರುತ್ತಾರೆ. ಅದಕ್ಕಾಗಿಯೇ ಲಾರಿ ಖರೀದಿಸಿದ್ದು, ಖಲೀಲ ಬಾಗವಾನ ಎಂಬುವರನ್ನು ಚಾಲಕನಾಗಿ ಕೆಲಸಕ್ಕೆ ಇರಿಸಿಕೊಂಡಿದ್ದಾರೆ.

ಕಲ್ಲಿನಿಂದ ಜಜ್ಜಿ ಭೀಕರ ಕೊಲೆ, ಯುವಕನ ಬರ್ಬರ ಹತ್ಯೆಗೆ ಕಾರಣವಾದರೂ ಏನು?

ಮೇ 21 ರಂದು ಬೆಳಗ್ಗೆ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಇರುವ ರೈತರಿಗೆ ಮಾರಿದ ದನಗಳನ್ನು ಬಿಟ್ಟು ಬರಲು ಲಾರಿಯಲ್ಲಿ ಕಳುಹಿಸಿದ್ದು, ಲಾರಿಯಲ್ಲಿ ಚಾಲಕ ಖಲೀಲ ಬಾಗವಾನ, ಸಹಾಯಕರಾಗಿ ಸಮೀರ ರಫೀಕ್‌ ಬೇಪಾರಿ ಹಾಗೂ ಮೌಲಾ ಅಬ್ದುಲ್‌ ರಹಿಮಾನ ಬೇಪಾರಿ ಕೂಡ ಇದ್ದರು.

ದನಗಳನ್ನು ಬಿಟ್ಟು ಅದರಿಂದ ಬಂದ 10 ಲಕ್ಷ ರೂಪಾಯಿ ಹಣದೊಂದಿಗೆ ವಾಪಸ್‌ ಬರುವಾಗ ಶಿವಣಗಿ ಬಳಿ ಲಾರಿ ನಿಲ್ಲಿಸಿ ಸಂಡಾಸಕ್ಕೆ ಹೋಗಿದ್ದಾರೆ. ಮರಳಿ ಬರುವಷ್ಟರಲ್ಲಿ ಲಾರಿಯಲ್ಲಿಟ್ಟಿದ್ದ 10 ಲಕ್ಷ ರೂಪಾಯಿ ಎಗರಿಸಲಾಗಿದೆ. ಸಂಡಾಸಕ್ಕೆ ಹೋಗುವಾಗ ಲಾರಿ ಹತ್ತಿರ ಒಂದು ಬಿಳಿ ಬಣ್ಣದ ಕಾರ್‌ ನಿಂತಿತ್ತು. ಮರಳಿ ಬರುವಾಗ ಕಾರ್‌ ಇರಲಿಲ್ಲ.

ಈ ಬಗ್ಗೆ ಗೌಸಮೋದಿನ ಶಾನೋಲ್‌ ಬೇಪಾರಿ ವಿಜಯಪುರ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

 

error: Content is protected !!