ವಿಜಯಪುರ

ರೌಡಿ ಆಸಾಮಿ ಮನೆ ಮೇಲೆ ರೇಡ್‌, ಅಕ್ರಮ ಆಯುಧ ಹುಡುಕಲು ಹೋದಾಗ ಸಿಕ್ಕಿತು ಅಪಾರ ಹಣ, ಆಲಮೇಲ ಠಾಣೆಯಲ್ಲೊಂದು ವಿಶೇಷ ಪ್ರಕರಣ ದಾಖಲು

ಸರಕಾರ ನ್ಯೂಸ್‌ ಆಲಮೇಲ

ಅಕ್ರಮ ಆಯುಧ ಹುಡುಕಲು ಹೋದಾಗ ಸಿಕ್ಕ ದಾಖಲೆ ಇಲ್ಲದ ಅಪಾರ ಹಣವನ್ನು ಪೊಲೀಸರು ಜಫ್ತು ಮಾಡಿಕೊಂಡಿದ್ದಾರೆ.

ಆಲಮೇಲದ ರೌಡಿ ಆಸಾಮಿ ಪಿಂಟು ಭೀಮು ಮೇಲಿನಮನಿ ಇವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ 11.50 ಲಕ್ಷ ರೂಪಾಯಿ ಸಿಕ್ಕಿದೆ. ಆದರೆ, ಅಕ್ರಮ ಆಯುಧ ಪತ್ತೆಯಾಗಿಲ್ಲ. ಹೀಗಾಗಿ ಹಣ ವಶಕ್ಕೆ ಪಡೆದು ಪಿಂಟುನ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ಪ್ರಕರಣದ ವಿವರ:

ಖೋಟಾ ನೋಟು ಚಲಾವಣೆ, ಇಬ್ಬರಿಗೆ ಶಿಕ್ಷೆ-ದಂಡ

ಡಿ. 3ರಂದು ಪೊಲೀಸರಿಗೆ ಬಂದ ಮಾಹಿತಿ ಪ್ರಕಾರ ಪಿಂಟುವಿನ ಮನೆಯಲ್ಲಿ ಅಕ್ರಮ ಆಯುಧ ಮತ್ತು ಹಣ ಇದ್ದು, ಆ ಹಣ ಸಾರ್ವಜನಿಕರಿಂದ ಹೆದರಿಸಿ ಬೆದರಿಸಿ ಸಂಗ್ರಹಿಸಲಾಗಿದೆ. ತಮಗೆ ಸಹಕಾರ ನೀಡದವರಿಗೆ ಪಿಂಟು ಹೆದರಿಸಿ ಹಣ ಕಿತ್ತುಕೊಳ್ಳುತ್ತಾನೆ ಎಂದಾಗ ಪೊಲೀಸರು ದಾಳಿಗೆ ಸಜ್ಜಾಗಿದ್ದರು.

ಅದೇ ದಿನ ಬೆಳಗ್ಗೆ 6ಕ್ಕೆ ಪೊಲೀಸರು ಪಿಂಟುವಿನ ಮನೆಗೆ ದಾಳಿಗಾಗಿ ತೆರಳಿದ್ದಾಗ ಮನೆ ಮುಂದೆ ಇಬ್ಬರು ವ್ಯಕ್ತಿಗಳು ನಿಂತಿದ್ದರು. ಅದರಲ್ಲಿ ಒಬ್ಬ ಆಲಮೇಲದ ರೌಡಿ ಆಸಾಮಿ ಪಿಂಟು ಭೀಮು ಮೇಲಿನಮನಿ ಎಂಬುದು ಪೊಲೀಸರಿಗೆ ಖಾತ್ರಿಯಾಯಿತು. ಬಳಿಕ ಆತನನ್ನು ವಿಚಾರಿಸಲಾಗಿ ಒಬ್ಬ ಪಿಂಟು ಊರ್ಫ್‌ ಸಂಘಪ್ಪ ತಂದೆ ಭೀಮು ಊರ್ಫ್‌ ಭಿಮಶಾ ಮೇಲಿನಮನಿ ಹಾಗೂ ಇನ್ನೋರ್ವ ಭೀಮಶಾ ತಿಪ್ಪಣ್ಣ ಮೇಲಿನಮನಿ ಎಂಬುದು ಗೊತ್ತಾಯಿತು.

ಆಯುಧಕ್ಕಾಗಿ ತಪಾಸಣೆ:

ಚಲಿಸುತ್ತಿದ್ದ ರೈಲಿಗೆ ಅಡ್ಡ ಬಿದ್ದು ಯುವಕ ಆತ್ಮಹತ್ಯೆ, ಅಬ್ಬಬ್ಬಾ ಎಂಥ ಭೀಕರ ಘಟನೆ ಗೊತ್ತಾ?

ಬಳಿಕ ಆಯುಧಕ್ಕಾಗಿ ಪೊಲೀಸರು ತಪಾಸಣೆ ನಡೆಸಲಾಗಿ ಮನೆಯಲ್ಲಿ ಆಧಾರ್‌ ಕಾರ್ಡ್‌, ಉತಾರೆ, ರೇಶನ್‌ ಕಾರ್ಡ್‌ ಮತ್ತಿತರ ದಾಖಲೆಗಳು ಸಿಕ್ಕವು. ಬೆಡ್‌ ರೂಮ್‌ನ ಒಂದು ಕಪಾಟಿನಲ್ಲಿ ಬಹಳಷ್ಟು ಹಣ ಸಿಕ್ಕಿತು. ಎಣಿಸಿ ನೋಡಲಾಗಿ 100 ರೂ. ಮುಖ ಬೆಲೆಯ 200 ನೋಟುಗಳು ಹಾಗೂ 500 ರೂ.ಮುಖಬೆಲೆಯ 2260 ನೋಟುಗಳು ಸಿಕ್ಕವು. ಒಟ್ಟು 11.50 ಲಕ್ಷ ರೂಪಾಯಿ ಇದ್ದು ಈ ಹಣದ ಬಗ್ಗೆ ದಾಖಲೆ ಪೂರೈಸಲು ಸಮಯಾವಕಾಶ ನೀಡಿದ ಪೊಲೀಸರು ಆಯುಧಕ್ಕಾಗಿ ಹುಡುಕಾಡಿದರಾದರೂ ಆಯುಧ ಸಿಗಲಿಲ್ಲ. ಹೀಗಾಗಿ ಹಣ ಜಫ್ತು ಮಾಡಿಕೊಂಡಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!