ಅಂತ್ಯಸಂಸ್ಕಾರ ವೇಳೆ ಸಿಡಿದ ಪಟಾಕಿ ಕಿಡಿ, ಆರು ಬೈಕ್ ಭಸ್ಮ…!
ಸರಕಾರ್ ನ್ಯೂಸ್ ಇಂಡಿ
ಅಂತ್ಯ ಸಂಸ್ಕಾರದ ವೇಳೆ ಸಿಡಿದ ಪಟಾಕಿ ಕಿಡಿಯಿಂದ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಅದರೊಳಗಿದ್ದ ಆರು ಬೈಕ್‌ಗಳು ಭಸ್ಮವಾದ ಘಟನೆ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಸ್ಥಳೀಯ ಜಯನಗೌಡ ಪಾಟೀಲ ಎಂಬುವರ ತೋಟದ ವಸತಿಯಲ್ಲಿ ಈ ಘಟನೆ ನಡೆದಿದ್ದು, ಅಪಾರ ಹಾನಿಯುಂಟಾಗಿದೆ. ಬೆಂಕಿ ಅವಘಡದಲ್ಲಿ ಗುಡಿಸಲಿನಲ್ಲಿದ್ದ ಹತ್ತು ಚೀಲ ತೋಗರಿ ಸೇರಿದಂತೆ ಅನೇಕ ವಸ್ತುಗಳು ಹಾನಿಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ವಿವರ:
ಸ್ಥಳೀಯ ನಿವಾಸಿ ಸುಭದ್ರಾಬಾಯಿ ಎಂಬುವವರು ತೀರಿಕೊಂಡಿದ್ದು, ಸುತ್ತಲಿನ ಗ್ರಾಮಸ್ಥರು ಹಾಗೂ ಬಂಧುಗಳು ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದರು. ಸಂಜೆ ಅಂತ್ಯ ಸಂಸ್ಕಾರಕ್ಕಾಗಿ ಶವ ಮೆರವಣಿಗೆ ನಡೆಸುತ್ತಿದ್ದ ವೇಳೆ ಪಟಾಕಿ ಸಿಡಿಸಲಾಗಿದೆ. ಅದರ ಒಂದು ಕಿಡಿ ಹಾರಿ ಗುಡಿಸಲಿಗೆ ಹೊತ್ತಿಕೊಂಡಿದೆ. ಏಕಾಏಕಿ ಬೆಂಕಿ ಜ್ವಾಲೆ ಹರಡಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಧಾವಿಸಿ ಬಂದು ಬೆಂಕಿ ನಂದಿಸುವ ಹೊತ್ತಿಗೆ ಬೈಕ್‌ಗಳು ಹಾಗೂ ಧಾನ್ಯಗಳು ಸಂಪೂರ್ಣ ಭಸ್ಮವಾಗಿದ್ದವು. ಸಂತ್ರಸ್ಥರಿಗೆ ಪರಿಹಾರ ನೀಡಲು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)