ರಾಜ್ಯ ಸುದ್ದಿ

ಪರಿಶಿಷ್ಟ ಪಂಗಡದವರಿಗೆ ಮಹತ್ವದ ಮಾಹಿತಿ, ಭೂ ಒಡೆತನ ಯೋಜನೆ ಮಾನದಂಡಗಳೇನು? ಅನುಸರಿಸುವ ವಿಧಾನ, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೇಲ್ಸ್‌

ಸರಕಾರ ನ್ಯೂಸ್‌ ಬೆಂಗಳೂರು

ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ಭೂ ಒಡೆತನ ಎಂಬ ಮಹತ್ವದ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಭೂ ರಹಿತರಿಗೆ ಸರ್ಕಾರವೇ ಭೂಮಿ ಒದಗಿಸಿಕೊಡಲಿದೆ. ಆದರೆ, ಈ ಯೋಜನೆಯ ಮಾನದಂಡಗಳೇನು? ಫಲಾನುಭವಿಗಳ ಆಯ್ಕೆಗಾಗಿ ಅನುಸರಿಸುವ ಮಾನದಂಡಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹೇಗಿರಲಿದೆ? ಎಂಬ ಮಾಹಿತಿ ಬಹುತೇಕರಿಗೆ ಗೊತ್ತಿಲ್ಲ.

ಈ ನಿಟ್ಟಿನಲ್ಲಿ ಭೂ ಒಡೆತನ ಯೋಜನೆ ಕುರಿತ ಸಂಪೂರ್ಣ ಡಿಟೇಲ್ಸ್‌ ಇಲ್ಲಿದೆ ನೋಡಿ.

ಅರ್ಜಿ ಆಹ್ವಾನ ಪ್ರಕ್ರಿಯೆ:

  1.  ಜಿಲ್ಲಾ ವ್ಯವಸ್ಥಾಪಕರು ಪರಿಶಿಷ್ಟ ಜಾತಿ / ಪಂಗಡದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಂದ ಏಪ್ರಿಲ್ ಮಾಹೆಯಲ್ಲಿ ಅರ್ಜಿ ಸಲ್ಲಿಸಲು ಸಮಯ ನಿಗದಿವಡಿಸಿ, ಅರ್ಜಿಗಳನ್ನು ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸುವುದು.
  2.  ಜಮೀನು ಮಾರಾಟ ಮಾಡಲು ಇಚ್ಛಿಸಿರುವ ಭೂ ಮಾಲೀಕರಿಂದಲೂ ಸಹ ಏಪ್ರಿಲ್ ಮಾಹೆಯಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸಲು ಪತ್ರಿಕಾ ಪ್ರಕಟಣೆ ಮೂಲಕ ವ್ಯಾಪಕ ಪ್ರಚಾರ ನೀಡುವುದು.
  3.  ಭೂ ಲಭ್ಯತೆ ಮತ್ತು ಬೇಡಿಕೆಗೆ ಅನುಗುಣವಾಗಿ ವರ್ಷದ ಪ್ರಾರಂಭದಲ್ಲಿ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವ್ಯವಸ್ಥಾಪಕರ ಜಂಟಿ ಖಾತೆಗೆ ಅನುದಾನ ಬಿಡುಗಡೆ ಮಾಡುವುದು.
  4.  ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು (ನಿಗದಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಮತ್ತು ಈ ಕೆಳಕಂಡ ದಾಖಲಾತಿಗಳನ್ನು ಲಗತ್ತಿಸಿ ನಿಗಮದ ಜಿಲ್ಲಾ ಕಛೇರಿಯಲ್ಲಿ/ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸುವುದು.)

ಅ) ಜಾತಿ ಪ್ರಮಾಣ ಪತ್ರ ತಹಸೀಲ್ದಾರರಿಂದ)

ಅ) ಆದಾಯ ಪ್ರಮಾಣ ಪತ್ರ (ತಹಸೀಲ್ದಾರರಿಂದ)

ಇ) ಭೂರಹಿತ ಕೃಷಿ ಕಾರ್ಮಿಕರ ಪತ್ರ ತಹಸೀ

ಈ) ಆಧಾರ ಕಾರ್ಡ್ ಮತ್ತು ರೇಷನ್ ಕಾರ್ಡ್ (ಪಡಿತರ ಚೀಟಿ)

 

  1. ಭೂ ಮಾಲೀಕರು ನಮೂನೆ-1ರ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು.

 

  1. ಜಾತಿ ಪ್ರಮಾಣ ಪತ್ರ
  2. ಭೂ ಮಾರಾಟ ಮಾಡಲು ಮುಚ್ಚಳಿಕೆ ಪತ್ರ (ಛಾಪಾ ಕಾಗದದಲ್ಲಿ ನೋಟರಿ ಮಾಡಿಸಿ ಸಲ್ಲಿಸತಕ್ಕದ್ದು.)
  3. ಭೂ ಮಾಲೀಕರ ವಂಶಾವಳಿ (ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಿಸಿಕೊಂಡು ಸಲ್ಲಿಸತಕ್ಕದ್ದು.)
  4. ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರ (NOC) (ಛಾಪಾ ಕಾಗದದಲ್ಲಿ ವಂಶಾವಳಿಯಲ್ಲಿರುವ ಸದಸ್ಯರು ನೋಟರಿ ಮಾಡಿಸಿ ಸಲ್ಲಿಸತಕ್ಕದ್ದು).
  5. ಇತ್ತೀಚಿನ ಪಹಣಿ ಪತ್ರಿಕೆ ಮತ್ತು ಹಕ್ಕು ಬದಲಾವಣೆ ಪ್ರತಿ (ಮ್ಯೂಟೇಷನ್ ಪ್ರತಿ).
  6. ಕಳೆದ 13 ವರ್ಷಗಳ ಇ.ಸಿ. (ಋಣಭಾರ ರಾಹಿತ್ಯ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು).

 

  1. ಜಿಲ್ಲಾ ವ್ಯವಸ್ಥಾಪಕರು ಕೈಗೊಳ್ಳಬೇಕಾದ ಕ್ರಮಗಳು.

ಎ. ಅರ್ಜಿದಾರರಿಂದ ಸ್ವೀಕೃತವಾಗುವ ಅರ್ಜಿಗಳು ಮತ್ತು ಭೂ ಲಭ್ಯತೆಗನುಗುಣವಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸುವುದು.

ಬಿ. ಅರ್ಜಿ ಬಂದ ತಕ್ಷಣ ಜಿಲ್ಲಾ ಕಛೇರಿಯಿಂದ ಭೂ ಮಾಲೀಕರಿಗೆ ಕ್ರಮ ಸಂಖ್ಯೆ: 5 ರಲ್ಲಿ ನಮೂದಿಸಿದ ದಾಖಲಾತಿಗಳನ್ನು ಸಲ್ಲಿಸಲು ಲಿಖಿತವಾಗಿ ತಿಳಿಸುವುದು ಮತ್ತು 45 ದಿವಸಗಳಲ್ಲಿ ದಾಖಲಾತಿಗಳನ್ನು ಸಲ್ಲಿಸದೇ ಇದ್ದಲ್ಲಿ ಸೂಕ್ತ ಹಿಂಬರಹದೊಂದಿಗೆ ಪ್ರಕರಣವನ್ನು ಮುಕ್ತಾಯಗೊಳಿಸುವುದು.

ಸಿ. ಫಲಾಪೇಕ್ಷಿಯು ಕ್ರಮ ಸಂಖ್ಯೆ (4) ರಲ್ಲಿ ರಲ್ಲಿ ನಮೂದಿಸಿದ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸದೇ ಇದ್ದಲ್ಲಿ ಅಂತಹ ಅರ್ಜಿಯನ್ನು ಸೂಕ್ತ ತಿಳುವಳಿಕೆಯ ಹಿಂಬರಹದೊಂದಿಗೆ ಹಿಂದಿರುಗಿಸುವುದು

ಡಿ. ಅರ್ಜಿದಾರರು (ಫಲಾಪೇಕ್ಷಿ) ಮತ್ತು ಅವರ ಕುಟುಂಬದ ಸದಸ್ಯರು ಕಳೆದ 05 ವರ್ಷಗಳಲ್ಲಿ ರೂ.1.00 ಲಕ್ಷಕ್ಕಿಂತ ಮೇಲ್ಪಟ್ಟು ನಿಗಮದಿಂದ ಸಾಲ / ಸಹಾಯಧನ ಪಡೆದಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸತಕ್ಕದ್ದಲ್ಲ.

ಇ. ಫಲಾಪೇಕ್ಷಿಗಳು ಭೂಮಿಯನ್ನು ಕೋರಿ ಅರ್ಜಿಗಳನ್ನು ಸಲ್ಲಿಸಲು ಮತ್ತು ಜಮೀನು ಮಾರಾಟ ಮಾಡಲು ಭೂ ಮಾಲೀಕರು ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಸಭೆಯ ಅನುಮೋದನೆ ಅಗತ್ಯವಿರುವುದಿಲ್ಲ.

ಎಫ್‌. ಅರ್ಜಿದಾರರು ಸಲ್ಲಿಸುವ ದಾಖಲೆಗಳನ್ನು ಪರಿಶೀಲನೆ ಮಾಡಿ ನಮೂನೆ-2 ರಲ್ಲಿ ವರದಿ ನೀಡುವಂತೆ ತಹಶೀಲ್ದಾರರನ್ನು ಕೋರುವುದು,

ಜಿ. ತಹಶೀಲ್ದಾರರು ಜಿಲ್ಲಾ ವ್ಯವಸ್ಥಾಪಕರು/ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ ನಮೂನೆ-2 ರಲ್ಲಿ 15 ದಿನಗಳೊಳಗಾಗಿ ವರದಿಯನ್ನು ನೀಡುವುದು.

ಎಚ್‌. ಜಿಲ್ಲಾ ವ್ಯವಸ್ಥಾಪಕರು ಮತ್ತು ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು ಅರ್ಜಿ ಸ್ವೀಕರಿಸಿದ 30 ದಿನಗಳೊಳಗಾಗಿ ಸ್ಥಳ ಪರಿಶೀಲನೆ ಮಾಡತಕ್ಕದ್ದು.

ಐ. ಸ್ಥಳ ಪರಿಶೀಲನಾ ವರದಿಯನ್ನು ನಮೂನೆ-3 ರಲ್ಲಿ ನಮೂದಿಸತಕ್ಕದು ಮತ್ತು ಸ್ಥಳ ಪರಿಶೀಲನಾ ಸಮಯದಲ್ಲಿ ಭೂ ಮಾಲೀಕರು ಮತ್ತು ಫಲಾನುಭವಿಗಳು ಇರುವ ಅಕ್ಷಾಂಶ ಮತ್ತು ರೇಖಾಂಶ ಸಹಿತ ಛಾಯಾ ಚಿತ್ರ ಹಾಗೂ ವಿಡಿಯೋವನ್ನು ಮಾಡತಕ್ಕದ್ದು.

ಜೆ. ಜಿಲ್ಲಾ ವ್ಯವಸ್ಥಾಪಕರು, ಕಂದಾಯ ಇಲಾಖೆಯಿಂದ ಪ್ರಕಟಿಸಿರುವ ಮಾರ್ಗಸೂಚಿ (Kar.igr.nic) (https://www.karnataka.gov.in/karigr/Pages/Home.aspx) 5 (website) , ಪರಿಶೀಲನಾ ವರದಿ ಮತ್ತು ಇತರ ದಾಖಲಾತಿಗಳ ಸಹಿತ ಪ್ರಸ್ತಾವನೆಯನ್ನು ಚೆಕ್ ಲಿಸ್ಟ್ ನೊಂದಿಗೆ 30 ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು.

ಕೆ.ಜಿಲ್ಲಾ ವ್ಯವಸ್ಥಾಪಕರು, ಭೂ ಮಾಲೀಕರು ಅರ್ಜಿಯೊಂದಿಗೆ ಸಲ್ಲಿಸಿದ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಸ್ವೀಕರಿಸಿದ ದಿನಾಂಕವನ್ನು ಜೇಷ್ಠತೆ ಎಂದು ಪರಿಗಣಿಸಿ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು.

ಎಲ್‌. ಜಿಲ್ಲಾಧಿಕಾರಿ ಕಛೇರಿಗೆ ಪ್ರಸ್ತಾವನೆ ಸಲ್ಲಿಸುವ ಮುನ್ನಾ ಎಲ್ಲಾ ದಾಖಲೆಗಳನ್ನು ಮೂಲ ಪ್ರತಿಗಳೊಂದಿಗೆ ತಾಳಮಾಡಿ ದೃಢೀಕರಿಸಿಕೊಳ್ಳತಕ್ಕದ್ದು.

 

  1. ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರಸ್ತಾವನೆಗಳನ್ನು ಸ್ವೀಕರಿಸಿದ ತೆಗೆದುಕೊಳ್ಳಬೇಕಾದ ಕ್ರಮಗಳು. ನಂತರ ತೆಗೆದುಕೊಳ್ಳಬೇಕಾದ ಕ್ರಮಗಳು.

ಎ. ಸ್ವೀಕರಿಸಿದ ಪ್ರಸ್ತಾವನೆಗಳನ್ನು ಒಂದು ವಹಿಯಲ್ಲಿ ದಾಖಲಿಸಿ ಅದರ ಜೇಷ್ಠತೆ ಅನುಸಾರ ಪರಿಶೀಲಿಸುವುದು.

 

ಬಿ. ಒಂದು ವೇಳೆ ಪ್ರಸ್ತಾವನೆಯಲ್ಲಿ ಏನಾದರೂ ದಾಖಲಾತಿಗಳ ಕೊರತೆ ಇದ್ದಲ್ಲಿ ತಕ್ಷಣವೇ ಅಂತಹ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರಿಂದ ಪಡೆಯತಕ್ಕದ್ದು.

ಸಿ.  ಜಿಲ್ಲಾಧಿಕಾರಿಗಳು ಇಚ್ಛಿಸಿದ್ದಲ್ಲಿ ಅವರು ಅಥವಾ ಉಪ ವಿಭಾಗಾಧಿಕಾರಿಗಳು ಜಿಲ್ಲಾ ಸಮಿತಿಯ ಸಭೆಗೆ ಮುನ್ನಾ ಸ್ಥಳ ಪರಿಶೀಲನ ಮಾಡಬಹುದು. (ಈ ಪ್ರಕ್ರಿಯೆ ಒಟ್ಟಾರೆ ಕಾರ್ಯಕ್ರಮದ ಅನುಷ್ಠಾನವನ್ನು ವಿಳಂಬಗೊಳಿಸದಂತೆ ಎಚ್ಚರವಹಿಸುವುದು).

ಡಿ.  ಜಿಲ್ಲಾ ವ್ಯವಸ್ಥಾಪಕರಿಂದ ಸ್ವೀಕೃತವಾಗುವ ಪ್ರಸ್ತಾವನೆಗಳಿಗೆ ದರ ನಿಗದಿಪಡಿಸಲು ಭೂ ಮೌಲ್ಯ, ನಿರ್ಧಾರಣ ಸಮಿತಿಯ ದಿನಾಂಕವನ್ನು ನಿಗದಿಪಡಿಸುವುದು.

ಇ.  ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಮಾರ್ಗಸೂಚಿ ಬೆಲೆಯನ್ನು ಒಂದು ಮಾನದಂಡವನ್ನಾಗಿ ವರಿಗಣಿಸಿ ಜಮೀನಿನ ಫಲವತ್ತತೆ, ನೀರಾವರಿ ಸೌಕರ್ಯ ಇತ್ಯಾದಿಗಳ ಬಗ್ಗೆ ಪರಿಶೀಲಿಸಿ ಸೂಕ್ತ ಸಮರ್ಥನೆಯೊಂದಿಗೆ ದರ ನಿಗದಿಪಡಿಸುವುದು. ಯಾವುದೇ ಕಾರಣಕ್ಕೂ ಮಾರ್ಗಸೂಚಿ ಬೆಲೆಯ ಮೂರುಪಟ್ಟು ದರವನ್ನು ಯಾಂತ್ರಿಕವಾಗಿ ನಿಗದಿಪಡಿಸತಕ್ಕದಲ್ಲ ದರ ನಿಗದಿಪಡಿಸುವ ಮುನ್ನಾ ಸಂಬಂಧಿಸಿದ ಭೂ ಮಾಲೀಕರೊಂದಿಗೆ ಫಲಾಪೇಕ್ಷಿಗಳ ಸಮ್ಮುಖದಲ್ಲಿ ದರ ಸಂಧಾನ ನಡೆಸುವುದು.

ಎಫ್‌.  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಸಮಿತಿಯಲ್ಲಿ ದರ ನಿಗದಿಪಡಿಸಿದ ಸಭೆಯ ದಿನಾಂಕವನ್ನು ಜೇಷ್ಠತೆಯನ್ನಾಗಿ ಪರಿಗಣಿಸಿ ಯಾದಿಯನ್ನು ತಯಾರಿಸಿ ಕೇಂದ್ರ ಕಛೇರಿಗೆ ಮಂಜೂರಾತಿಗೆ ಸಲ್ಲಿಸುವುದು.

ಜಿ.  ವ್ಯವಸ್ಥಾಪಕ ನಿರ್ದೇಶಕರು, ಯಾದಿಯನ್ನು ಪರಿಶೀಲಿಸಿ ಮಂಜೂರಾತಿ ನೀಡಿ 15 ದಿನಗಳೊಳಗಾಗಿ ಜಿಲ್ಲಾಧಿಕಾರಿಗಳಿಗೆ ಹಿಂತಿರುಗಿಸುವುದು.

ಎಚ್‌. ಕೇಂದ್ರ ಕಛೇರಿಯಿಂದ ಮಂಜೂರಾತಿ ದೊರೆತ ನಂತರ ನಮೂನೆ-3 ರಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಿಂದಲೇ ಮಂಜೂರಾತಿ ಆದೇಶವನ್ನು 15 ದಿನಗಳೊಳಗಾಗಿ ಹೊರಡಿಸುವುದು ಮತ್ತು ಈ ಆದೇಶವನ್ನು ಜಿಲ್ಲಾ ವ್ಯವಸ್ಥಾಪಕರುಗಳಿಗೆ, ಭೂ ಮಾಲೀಕರಿಗೆ ಮತ್ತು ಫಲಾಪೇಕ್ಷಿಗಳಿಗೆ ನೀಡುವುದು.

 

  1.  ಮಂಜೂರಾತಿ ನಂತರ ಜಿಲ್ಲಾ ವ್ಯವಸ್ಥಾಪಕರು ತೆಗೆದುಕೊಳ್ಳಬೇಕಾದ ಕ್ರಮಗಳು.

ಎ) ಜಿಲ್ಲಾ ವ್ಯವಸ್ಥಾಪಕರು ಜಿಲ್ಲಾಧಿಕಾರಿಗಳ ಕಛೇರಿಯಿಂದ ಜಮೀನು ಖರೀದಿಗೆ ಮಂಜೂರಾತಿ ದೊರತ ನಂತರ 11ಇ ನಕಾಶೆ ಮಾಡಿಸತಕ್ಕದ್ದು

ಬಿ) ಫಲಾನುಭವಿಗೆ ಮಂಜೂರು ಮಾಡುವ ಸಾಲದ ಮೊತ್ತಕ್ಕೆ ಅಗತ್ಯವಿರುವ ಪೂ-ನೋಟ್, ಕನ್ನಿಡರೇಷನ್-ರಶೀದಿ, ಸಾಲದ ಕರಾರು ಪತ್ರ ಹಾಗೂ ಇತರ ಪೂರಕ ದಾಖಲಾತಿಗಳನ್ನು ಪಡೆಯತಕ್ಕದ್ದು ಮತ್ತು ಸಾಲ ನೀಡಿರುವ ಬಗ್ಗೆ ವಿವರಗಳನ್ನು ನಿಗದಿತ ರಿಜಿಸ್ಮರ್‌ನಲ್ಲಿ ನಮೂದಿಸತಕ್ಕದ್ದು.

ಸಿ) ಫಲಾನುಭವಿಯ ಹೆಸರಿಗೆ ಜಮೀನು ನೋಂದಣಿ ಮಾಡಿಸುವ ಮುನ್ನಾ ಭೂ ಮಾಲೀಕರು ಸ್ಥಳೀಯ ಬ್ಯಾಂಕುಗಳಿಂದ ಸಾಲ ಪಡೆದಿದ್ದಲ್ಲಿ ಬೇಬಾಕಿ ಪತ್ರ (NDC NO DUE CERTIFICATE) ಪಡೆದು, ಅದರಂತೆ ಸಾಲದ ಮೊತ್ತವನ್ನು ನೇರವಾಗಿ ಹಣಕಾಸು ಸಂಸ್ಥೆಗೆ ನೀಡುವುದು. ತದನಂತರ ಜಮೀನಿನ ಮೇಲೆ ಬೋಜ

/ ಅಡಮಾನವು ಪಹಣಿ / ECಯಲ್ಲಿ ದಾಖಲಾಗಿದ್ದಲ್ಲಿ ತರವುಗೊಳಿಸಿ ಖುಲಾಸೆ ಪತ್ರ ವಡೆದು ಉಳಿದ ಮೊತ್ತವನ್ನು ಭೂ ಮಾಲೀಕರಿಗೆ ಪಾವತಿಸುವುದು.

ಡಿ) ಮಂಜೂರಾತಿಯಂತೆ ನೊಂದಣಿಯಾದ ನಂತರ ಪ್ರಥಮ ಹಂತದಲ್ಲಿ ಶೇ.80 ರಷ್ಟು ಅನುದಾನವನ್ನು ಭೂ ಮಾಲೀಕರಿಗೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡುವುದು.

ಇ) ಖರೀದಿ ಪತ್ರವನ್ನು ಉಪನೋಂದಣಾಧಿಕಾರಿಗಳಿಂದ ಪಡೆದು, ಫಲಾನುಭವಿಯ ಹೆಸರು ಪಹಣಿ ಪತ್ರಿಕೆಯಲ್ಲಿ ನಮೂದಿಸಲು ಕ್ರಮವಹಿಸುವುದು.

ಎಫ್‌) ಆರ್.ಟಿ.ಸಿ. / ಉತಾರ ವಹಣೆಯ ಕಲಂ-11 ರಲ್ಲಿ ಪರಭಾರ ನಿಷೇಧಿಸಿದ ಎಂದು ದಾಖಲಿಸುವುದು.

ಜಿ) ಭೂ ಮಾಲೀಕರಿಂದ ಫಲಾನುಭವಿಗೆ ಜಮೀನು ಹಸ್ತಾಂತರಿಸಿದ ಸ್ವಾಧೀನ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು (ನಮೂನೆ-5) 8) ಜಿಲ್ಲಾಧಿಕಾರಿ ಕಛೇರಿಯಿಂದ ಶೇ.20 ರಷ್ಟು ಅನುದಾನವನ್ನು ಬಿಡುಗಡೆ ಮಾಡುವ ಮುಂಚೆ ಮೇಲ್ಕಂಡ

ಈ ಮೂಲ ದಾಖಲಾತಿಗಳ ಪ್ರತಿಗಳನ್ನು ಜಿಲ್ಲಾಧಿಕಾರಿ ಕಛೇರಿಗೆ ಸಲ್ಲಿಸತಕ್ಕದ್ದು (ನೋಂದಣಿ ಆದ ನಂತರ ಅಂದಾಜು 2 ತಿಂಗಳ ಸಮಯದಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸತಕ್ಕದ್ದು.

ಎಚ್‌) ಮೇಲ್ಕಂಡ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಉಳಿದ ಶೇ.20 ರಷ್ಟು ಅನುದಾನವನ್ನು ಜಿಲ್ಲಾಧಿಕಾರಿ ಕಛೇರಿಯಿಂದ ಭೂ ಮಾಲೀಕರಿಗೆ ಬಿಡುಗಡೆ ಮಾಡುವುದು.

ಐ) ಜಮೀಮ ನೋಂದಣಿಯಾದ ನಂತರ ಜಮೀನು ಸರಹದನ್ನು ಸರ್ವೆಯರ್ ಮೂಲಕ ಗುರುತು ಹಾಕಿಸಿ, ಫಲಾನುಭವಿಗಳ ಸ್ವಾಧೀನಕ್ಕೆ ನೀಡತಕ್ಕದ್ದು

ಜೆ) ಜಮೀನು ನೋಂದಣಿಗೊಂಡ 45 ದಿವಸದೊಳಗಾಗಿ ಜಮೀನಿನ ಖಾತೆಯನ್ನು ಫಲಾನುಭವಿಯ ಹೆಸರಿಗೆ ವರ್ಗಾಯಿಸಲು ಮತ್ತು ಜಮೀನು ನಿಗಮಕ್ಕೆ ಆಧಾರಮಾಡಿಸಿ ಕಲಂ 11 ರಲ್ಲಿ ಪರಭಾರ ಮತ್ತು ಮಾರಾಟ ನಿಷೇದಿಸಿದೆ ಎಂದು ಪಹಣಿಯಲ್ಲಿ ನಮೂದಿಸಲ್ಪಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ನೋಂದಣಿ ನಂತರ ಎರಡನೇ ಇ.ಸಿಯನ್ನು ಪಡೆದು ಕಡತದಲ್ಲಿ ಇಟ್ಟುಕೊಳ್ಳತಕ್ಕದ್ದು,

(ಮಹತ್ವದ ಸುದ್ದಿಗಳಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

Leave a Reply

Your email address will not be published. Required fields are marked *

error: Content is protected !!