ವಿಜಯಪುರದಲ್ಲಿ Onlineನಲ್ಲಿ 43 ಲಕ್ಷ ವಂಚನೆ
ವಿಜಯಪುರ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಹೆಸರಲ್ಲಿ ಲಕ್ಷಾಂತರ ನಗದು ವಂಚನೆಗೈದಿರುವ ಘಟನೆ ಐತಿಹಾಸಿಕ ನಗರಿ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಹೌದು.. Van Eck ಹೆಸರಿನಲ್ಲಿ Investment Advertising ಮಾಡುವಂತೆ ಹೇಳಿ ವಿಜಯಪುರ ನಗರದ ವ್ಯಕ್ತಿಗೆ ಲಕ್ಷ ಲಕ್ಷ ಆನ್ಲೈನ್ ಮೂಲಕ ವಂಚನೆ ಮಾಡಲಾಗಿದೆ. ಆನಂದ(ಹೆಸರು ಬದಲಾವಣೆ ಮಾಡಲಾಗಿದೆ) ಎಂಬುವರಿಗೆ ಹಣ ಹೂಡಿಗೆ ಮಾಡುವಂತೆ ಆನ್ಲೈನ್‌ನಲ್ಲಿ ಅರ್ಜಿ ತುಂಬಲು ಹೇಳಿದ್ದಾರೆ. ಇದನ್ನೇ ನಂಬಿಕೊಂಡು 43,84,046 ಹಣ ಕಳೆದುಕೊಂಡಿದ್ದಾರೆ. Share Trading ಮಾಡುಲು ಹೇಳಿ ಹಂತ ಹಂತವಾಗಿ ಹಣ ಹಾಕಿಸಿಕೊಂಡು ಹಣ ವಂಚನೆಗೈದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಒ ಪೊಲೀಸ ಠಾಣೆಯಲ್ಲಿ 29-06-2024ಕ್ಕೆ ಕೇಸ್ ದಾಖಲಾಗಿದೆ.