ತಿಕೋಟಾ ಯೋಧ ನಿಧನ, ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸೈನಿಕ, ಅಯ್ಯೋ ಏನಾಯಿತು? ಹೇಗಾಯಿತು?
ವಿಜಯಪುರ: ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ತಿಕೋಟಾದ ಯೋಧ ನಿಧನರಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ ವ್ಯಕ್ತಪಡಿಸಿ ‘ಎಕ್ಸ್’ ಮಾಡಿದ್ದಾರೆ.
ತಿಕೋಟಾ ಮೂಲದ ರಾಜು ಕರ್ಜಗಿ ನಿಧನರಾದ ಯೋಧ. ಇವರು ಜಮ್ಮು-ಕಾಶ್ಮೀರದ ಮಹಾರ್ ರೆಜಿಮೆಂಟ್- 13ರ ಯುನಿಟ್-51 ರ ರಾಷ್ಟ್ರೀಯ ರೈಫಲ್ ಬಟಾಲಿಯನ್‌ನಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಡಿಕೆ ಶಿವಕುಮಾರ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದು, ರಾಜು ಅವರ ನಿಧನದಿಂದಾಗಿ ಭಾರತೀಯ ಸೇನೆಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಅಂಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.