ಮನರಂಜನೆರಾಜ್ಯ ಸುದ್ದಿಸಿನೆಮಾ

ಇದು ಎಂಥಾ ಲೋಕವಯ್ಯ Kannada Movie

ಸುಪ್ತಮನಸ್ಸಿನ ಭಾವನೆಗಳಿಗೆ ಮೂಢನಂಬಿಕೆಗಳ ಲೇಪನವಾದಾಗ ಸಾಮಾನ್ಯ ಜನರ ತುಡಿತಗಳನ್ನು ಪರಿಚಿತ ಕಣ್ಣುಗಳಿಂದ ನೋಡಿದಂತೆ ಪುಳಕ ನೀಡುವ ಚಿತ್ರವೇ ಇದು ಎಂಥಾ ಲೋಕವಯ್ಯ .ನಾಯಕ, ನಾಯಕಿ ಇಲ್ಲದೇ ಕಥೆಯೇ ಜೀವಾಳವಾಗಿರುವ, ಆಧುನಿಕ ಆಯಾಮಗಳಲ್ಲಿ ಚಿತ್ರಿತವಾಗಿರುವ, ಕರಾವಳಿಯ ಮಣ್ಣಿನಲ್ಲಿಯೇ ಮೂಡಿಬಂದಿರುವ *ಇದು ಎಂಥಾ ಲೋಕವಯ್ಯ* ಕನ್ನಡ ಸಿನೆಮಾ ಪ್ರತಿಷ್ಟಿತ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಕನ್ನಡ ಸಿನೆಮಾ ಸ್ಪರ್ಧಾ ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಸಿತೇಶ್ ಸಿ ಗೋವಿಂದ್ ಈ ಸಿನೆಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಸಿನೆಮಾವನ್ನು ನಿರ್ಮಿಸಿರುವ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರಿಗೆ ಇದು ಚೊಚ್ಚಲ ಪ್ರಯತ್ನವಾಗಿದ್ದು,ಈ ಸಿನೆಮಾ ನಮ್ಮ ನಿಮ್ಮ ಸುತ್ತ ನಡೆಯುವ ನೈಜ ಘಟನೆಗಳನ್ನು ಪೋಣಿಸಿ ಕಾಲ್ಪನಿಕ ಹಂದರದಲ್ಲಿ ಮನೋಜ್ಞವಾಗಿ ಹೊರತರಲಾಗಿದ್ದು, ಈ ಸಿನೆಮಾವನ್ನು ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಕನ್ನಡ ಸಿನೆಮಾ ಸ್ಪರ್ಧಾ ವಿಭಾಗಕ್ಕೆ ಆಯ್ಕೆ ಮಾಡಿದ ಜ್ಯೂರಿಗಳಿಗೆ, ಆಯ್ಕೆ ಸಮಿತಿ ಸದಸ್ಯರಿಗೆ, ಸಿನೆಮಾದ ಕಲಾವಿದರಿಗೆ, ತಂತ್ರಜ್ಞರಿಗೆ ಹಾಗೂ ವಿಶೇಷವಾಗಿ ನಿರ್ದೇಶಕ ಸಿತೇಶ್ ಸಿ ಗೋವಿಂದ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು *ನಿರ್ಮಾಪಕ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ತಿಳಿಸಿದ್ದಾರೆ.

error: Content is protected !!