ನಮ್ಮ ವಿಜಯಪುರ

ಗಡಿಬಿಡಿಯಲ್ಲಿ ಬಸ್‌ ಹತ್ತುವಾಗ ಹೊಯ್ತು ಚಿನ್ನ, ಹೆಚ್ಚಿದ ಕಳ್ಳತನಕ್ಕೆ ಬೆಚ್ಚಿದ ಮಹಿಳೆಯರು

ಸರಕಾರ್‌ ನ್ಯೂಸ್‌ ವಿಜಯಪುರ

ಗಡಿಬಿಡಿಯಲ್ಲಿ ಬಸ್‌ ಹತ್ತುವಾಗ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳುವಾದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಈಗಾಗಲೇ ಎರಡ್ಮೂರು ಪ್ರಕರಣಗಳು ಕಂಡು ಬಂದಿದ್ದು, ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ನಡೆದಿದೆ. ಇಂಡಿಯ ದೇಶಪಾಂಡೆ ಎಲ್‌ಟಿ ನಂ.1ರ ನಿವಾಸಿ ರೇಷ್ಮಾ ಸುನೀಲ ಚವಾಣ್‌ ಎಂಬುವರ ಚಿನ್ನಾಭರಣ ಕಳುವಾಗಿದೆ.

ಅಕ್ಕ ನಿರ್ಮಲಾಳ ಆರೋಗ್ಯ ಸರಿಯಿಲ್ಲವೆಂದು ಮಾತನಾಡಿಸಲು ವಿಜಯಪುರಕ್ಕೆ ಬಂದಿದ್ದ ರೇಷ್ಮಾ ಮರಳಿ ಇಂಡಿಗೆ ಹೋಗಲೆಂದು ವಿಜಯಪುರ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತುವಾಗ ಏಕಾಏಕಿ ಬ್ಯಾಗ್‌ ಜಗ್ಗಿದಂತಾಗಿದೆ. ಒಳಗೆ ಬಂದು ಸೀಟಿನಲ್ಲಿ ಕುಳಿತು ವ್ಯಾನಿಟಿ ಬ್ಯಾಗ್‌ ಚೆಕ್‌ ಮಾಡಲಾಗಿ ಅದರಲ್ಲಿದ್ದ ಅಂದಾಜು 42,500ರೂ. ಮೌಲ್ಯದ 12.5 ಗ್ರಾಂ ಚಿನ್ನಾಭರಣ ಕಳುವಾಗಿತ್ತು. ಈ ಬಗ್ಗೆ ರೇಷ್ಮಾ ಗಾಂಧಿ ಚೌಕ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!