ನಮ್ಮ ವಿಜಯಪುರ

ಸಹಾಯಕ ಪ್ರಾಧ್ಯಾಪಕನ ಮನೆಯಲ್ಲಿ ಕಳ್ಳತನ, ಏನೆಲ್ಲಾ ಕಳುವಾಗಿದೆ ಗೊತ್ತಾ?

ಸರಕಾರ್‌ ನ್ಯೂಸ್‌ ವಿಜಯಪುರ

ಸರಕಾರಿ ಪ್ರಥಮ ದರ್ಜೆ ಕಾಲೇಜೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಪ್ರಾಧ್ಯಾಪಕನ ಮನೆಯಲ್ಲಿ ಕಳ್ಳತನ ನಡೆದಿದೆ.

ಮನಗೂಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಚಿನಕುಮಾರ ಮಹಾಂತೇಶ ಪಾಟೀಲ ಎಂಬುವರ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆದಿದೆ. ವಿಜಯಪುರದ ಶಾಂತವೀರ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಸಚಿನಕುಮಾರ ಜ. 10ರಂದು ತಮ್ಮ ಸ್ವಂತ ಊರಾದ ಯತ್ನಾಳದಲ್ಲಿ ದೇವರ ಕಾರ್ಯಕ್ರಮಕ್ಕೆಂದು ಕುಟುಂಬ ಸಮೇತ ತೆರಳಿದ್ದಾರೆ. ಮರಳಿ ಬಂದು ನೋಡುವಷ್ಟರಲ್ಲಿ ಬಾಗಿಲ ಕೀಲಿ ಮುರಿದಿತ್ತು. ಗಾಬರಿಯಾಗಿ ಒಳಗೆ ಹೋಗಿ ನೋಡಿದರೆ ಎಲ್ಲವೂ ಅಸ್ತವ್ಯಸ್ತಗೊಂಡಿತ್ತು.

ಏನೆಲ್ಲಾ ಕಳುವಾಗಿದೆ?

ಎಲ್‌ ಜಿ ಕಂಪನಿಯ 21 ಇಂಚಿನ ಟಿವಿ, ಬಂಗಾರದ ಮಂಗಳ ಸೂತ್ರ, ಜುಮುಕಿ, ಲ್ಯಾಪ್‌ಟಾಪ್‌ ಸೇರಿದಂತೆ ಒಟ್ಟು 2.98 ಲಕ್ಷ ರೂ.ಮೌಲ್ಯದ ಸಾಮಗ್ರಿ ಕಳುವಾಗಿದೆ.

ಈ ಬಗ್ಗೆ ಜ. 11ರಂದು ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದುತನಿಖೆ ಚುರುಕುಗೊಳಿಸಲಾಗಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

 

error: Content is protected !!