ಮಳೆಗಾಗಿ ಹೆಣದ ಬಾಯಿಗೆ ನೀರುಣಿಸಿದರಾ? ಗೋರಿಯೊಳಗೆ ಪೈಪ್ ಇಳಿಸಿದ ಗ್ರಾಮಸ್ಥರು ಮಾಡಿದ್ದೇನು?
ಸರಕಾರ್ ನ್ಯೂಸ್ ತಾಳಿಕೋಟೆ
ಮುಂಗಾರು ಹೊಡೆತದಿಂದ ಕಂಗಾಲಾದ ರೈತಾಪಿ ಜನ ಮಳೆಗಾಗಿ ದಿನಕ್ಕೊಂದು ಪ್ರಾರ್ಥನೆ, ಪೂಜೆ ಸಲ್ಲಿಸುತ್ತಿರುವುದೇನೋ ಸರಿ….ಆದರೆ ಇಲ್ಲೊಂದು ಗ್ರಾಮದಲ್ಲಿ ಮಳೆಗಾಗಿ ಹೆಣದ ಬಾಯಿಗೆ ನೀರುಣಿಸಿದ ಅಪರೂಪದ ಘಟನೆ ನಡೆದಿದೆ.
ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಗ್ರಾಮದ ಸ್ಮಶಾನದ
ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಟ್ಯಾಂಕರ್ ನ ಪೈಪ್ ಮೂಲಕ ನೀರುಣಿಸಿದ್ದಾರೆ.
ಹಾಗೆ ಮಾಡಿದರೆ ಮಳೆ ಬರಲಿದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಏನಕೇನ ಪ್ರಕಾರೇಣ ಎಂಬಂತೆ ಜಿಲ್ಲೆಯಲ್ಲಿ ಕೊಂಚ ಮಳೆಯೂ ಸುರಿಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.