ಮಳೆಗೆ ಕುಸಿದ ಮೇಲ್ಮುದ್ದಿ ಮನೆ, ತಪ್ಪಿದ ಅನಾಹುತ, ಬೀದಿಗೆ ಬಂದ ಬದುಕಿಗೆ ನೆರವಾಗುವುದೇ ಜಿಲ್ಲಾಡಳಿತ?
ಸರಕಾರ್ ನ್ಯೂಸ್ ದೇ.ಹಿಪ್ಪರಗಿ
ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಮೇಲ್ಮುದ್ದಿ ಮನೆಗಳು ಕುಸಿಯತೊಡಗಿವೆ.
ದೇವರಹಿಪ್ಪರಗಿ ತಾಲ್ಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ಮನೆಯೊಂದು ಕುಸಿದು ಬಿದ್ದಿದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ.
ಬಸವರಾಜ ಸಂಗಪ್ಪ ಸಿಂದಗಿ ಎಂಬುವರ ಮನೆ ಕುಸಿದಿದೆ. ಮನೆಯಲ್ಲಿದ್ದ ದಿನ ಬಳಕೆ ಸಾಮಗ್ರಿಗಳು ಮಣ್ಣು ಪಾಲಾಗಿವೆ. ಬದುಕು ಬೀದಿಗೆ ಬಂದಂತಾಗಿದ್ದು ನೆರವಿಗೆ ಮೊರೆ ಇರಿಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಸಂತ್ರಸ್ತರ ನೆರವಿಗೆ ಧಾವಿಸಬೇಕಿದೆ.