ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ಜನ, ಚಿನ್ನದ ಅಂಗಡಿಗೂ ಕನ್ನ, ಮದ್ಯದಗಂಡಿಯಲ್ಲೂ ಕಳವು…!!!
ಸರಕಾರ ನ್ಯೂಸ್ ಸಿಂದಗಿ
ಚೆಡ್ಡಿ ಗ್ಯಾಂಗ್ ಹಾವಳಿ ಜೀವಂತವಾಗಿರುವಾಗಲೇ ಮದ್ಯದ ಅಂಗಡಿ ಸೇರಿದಂತೆ ವಿವಿಧೆಡೆ ನಡೆದ ಸರಣಿಗಳ್ಳತನ ಪ್ರಕರಣ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
ಸಿಂದಗಿ ತಾಲೂಕಿನ ರಾಂಪುರ (ಪಿಎ) ಗ್ರಾಮದಲ್ಲಿ ಒಂದೇ ರಾತ್ರಿ 3 ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ನಾಲ್ಕು ಜನ ಖತರ್ನಾಕ ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನಡೆಸಿರುವ ಕಳ್ಳತನ ಪ್ರಕರಣಗಳು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿವೆ. ಕಳ್ಳತನದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮದ್ಯದಂಗಡಿಯಲ್ಲಿ ಏಳು ಸಾವಿರ ರೂಪಾಯಿ ನಗದು ಹಾಗೂ 8 ಬಿಯರ್ ಮತ್ತು 5 ಐಬಿ ವಿಸ್ಕಿ ಕಳ್ಳತನವಾಗಿದೆ.
ಮತ್ತೊಂದೆಡೆ ಬಂಗಾರದ ಆಭರಣದ ಅಂಗಡಿ, ಬುಕ್ ಸ್ಟಾಲ್ ಅಂಗಡಿಯಲ್ಲೂ ಕಳ್ಳತನವಾಗಿದೆ.
ಸಿಂದಗಿ ಪೊಲೀಸ ಠಾಣಾ ಪಿಎಸ್ ಐ ಬಿ.ಎನ್. ರಬಕವಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)