ವಿಜಯಪುರ

ವಿಜಯಪುರಕ್ಕೆ ಚೆಡ್ಡಿ ಗ್ಯಾಂಗ್ ಎಂಟ್ರಿ….ಸಾರ್ವಜನಿಕರೇ ಹುಷಾರ್….ಪೊಲೀಸ್ ರು ನೀಡಿದ ಸಂದೇಶ ಏನು ಗೊತ್ತಾ?

ಸರಕಾರ‌ ನ್ಯೂಸ್ ವಿಜಯಪುರ

ಕರ್ನಾಟಕ- ಮಹಾರಾಷ್ಟ್ರ ಗಡಿಭಾಗದ ಜಿಲ್ಲೆ ವಿಜಯಪುರಕ್ಕೆ ಎಂಟ್ರಿ ಕೊಟ್ಟಿರುವ ಚೆಡ್ಡಿ ಗ್ಯಾಂಗ್ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ !

ಕಳೆದ ಹಲವು ದಿನಗಳಿಂದ ವಿಜಯಪುರ ನಗರದಲ್ಲಿ ಬೀಡು ಬಿಟ್ಟಿರುವ ಚೆಡ್ಡಿ ಗ್ಯಾಂಗ್ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದೆ.

ಚಡ್ಡಿ ಧರಿಸಿ, ಮಾಸ್ಕ್ ಮತ್ತು ಮಫ್ಲರ್ ಹಾಕಿ ಗುಂಪುಗೂಡಿ ಕಳ್ಳತನಕ್ಕಿಳಿಯುವ ಈ ಗ್ಯಾಂಗ್ ನ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

Heddi gang
ವಿಜಯಪುರದ ಮನೆಯೊಂದರ ಕಂಪೌಂಡ್ ಹಾರಿ ಬಂದ ಚೆಡ್ಡಿ ಗ್ಯಾಂಗ್ ಕಳ್ಳರು.

ಬಿಗ್ ಅಲರ್ಟ್ ಆಗಿರುವ ಪೊಲೀಸ್ ಇಲಾಖೆ ಸಾರ್ವಜನಿಕರನ್ನು ಎಚ್ಚರಗೊಳಿಸುವುದರ ಜೊತೆಗೆ ಚೆಡ್ಡಿ ಗ್ಯಾಂಗ್ ಪತ್ತೆಗೆ ವ್ಯಾಪಕ ಜಾಲ ಬೀಸಿದೆ.

ಮಾತ್ರವಲ್ಲ, ಆಟೋ, ವಾಟ್ಸಪ್ ಸಂದೇಶದ ಮೂಲಕ ಸಾರ್ವಜನಿಕರನ್ನು ಜಾಗೃತಗೊಳಿಸಲಾಗುತ್ತಿದೆ.
ಇಂಥ ಚೆಡ್ಡಿ ಗ್ಯಾಂಗ್ ಕಂಡು ಅಂದರೆ
ಮೊ. 9480804200 ಅಥವಾ 112 ಗೆ ಕರೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!