ವಿಜಯಪುರ

ಪೊಲೀಸರ ಹೆಸರಲ್ಲೇ ಕಳ್ಳತನ, ಯಾಮಾರಿಸಿ ಕದ್ದೊಯ್ದರು ಚಿನ್ನಾಭರಣ, ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

ಸರಕಾರ ನ್ಯೂಸ್ ವಿಜಯಪುರ

ನಾವು ಪೊಲೀಸ್-ಇಲ್ಲಿ ತುಂಬಾ ಜನ ಕಳ್ಳರಿರುತ್ತಾರೆ ಎಂದು ಮೈಮೇಲಿನ ಚಿನ್ನಾಭರಣ ಬಿಚ್ಚಿಸಿ ಸ್ಕೂಟಿ ಹಿಂದಿನ ಡಿಕ್ಕಿಯಲ್ಲಿ ಮುಚ್ಚಿಡುವ ನಾಟಕ ಮಾಡಿ ವ್ಯಕ್ತಿಯೋರ್ವನ ರೂ.1.80 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಇಂಟ್ರೆಸ್ಟಿಂಗ್ ಕೇಸ್ ಬೆಳಕಿಗೆ ಬಂದಿದೆ.

ವಿಜಯಪುರದ ಸೋಲಾಪುರ ರಸ್ತೆಯಲ್ಲಿರುವ ಉಪ ನೋಂದಣಿ ಇಲಾಖೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದ ಬೆಂಡಿಗೇರಿ ಗಲ್ಲಿಯ ನಿವಾಸಿ ಮಲ್ಲಪ್ಪ ಸಂಗಪ್ಪ ತಿಗಣಿಬಿದರಿ ಇವರನ್ನು ಸರ್ಕಾರಿ ಐಟಿಐ ಕಾಲೇಜ್ ಬಳಿ ಹಿಂದಿನಿಂದ ಬಂದು ತಡೆದು ನಿಲ್ಲಿಸಿದ ಬೈಕ್ ಸವಾರರಿಬ್ಬರು ‘ನಿಲ್ಲಿರಿ, ಎಷ್ಟೊತ್ತಿನ ತನಕ ಒದರುತ್ತಿದ್ದೇವೆ’ ಎಂದು ಜೋರು ದನಿಯಲ್ಲಿ ಹೇಳುತ್ತಾ ಹತ್ತಿರ ಬಂದವರೇ ‘ನಾವು ಪೊಲೀಸರಿದ್ದೇವೆ. ಹೀಗೆ ಮೈಮೇಲೆ ಚಿನ್ನಾಭರಣ ಧರಿಸಿ ಓಡಾಡಬಾರದು’ ಎಂದು ಹೇಳಿದ್ದಾರೆ.

ಬಳಿಕ ಕೊರಳಲ್ಲಿನ ಚಿನ್ನದ ಸರ ಮತ್ತು ಕೈ ಬೆರಳಿಗಿದ್ದ ಚಿನ್ನದುಂಗುರ ಸೇರಿ ಒಟ್ಟು 1.80 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ಸ್ಕೂಟರ್ ಹಿಂದಿನ ಡಿಕ್ಕಿಯಲ್ಲಿ ಬಿಳಿ ಹಾಳೆಯಲ್ಲಿ ಕಟ್ಟಿಡುವಂತೆ ಮಾಡಿ ನಕಲಿ ಚಿನ್ನದ ಸರ ಮತ್ತು ಉಂಗುರು ಇರಿಸಿ ಪರಾರಿಯಾಗಿದ್ದಾರೆ. ಮನೆಗೆ ಹೋಗಿ ನೋಡಲಾಗಿ ಚಿನ್ನದ ಸರ ಮತ್ತು ಉಂಗುರ ನಕಲಿ ಎಂಬುದು ಗೊತ್ತಾಗಿದೆ. ಮೋಸ-ವಂಚನೆಗೆ ಒಳಗಾಗಿರುವ ಮಲ್ಲಪ್ಪ ಆದರ್ಶ ನಗರ ಠಾಣೆಗೆ ದೂರು ನೀಡಿದ್ದಾರೆ.
*

error: Content is protected !!