ವಿಜಯಪುರ

ಅಕ್ರಮ ಮರಳು ದಂಧೆ ವಿರುದ್ಧ ಮುಂದುವರಿದ ಗೆಜ್ಜಿ ಸಮರ, ಖಾಕಿ ಖದರ್‌ ಕಂಡು ಕಂಗಾಲಾಗಿ ಓಡಿದ ದಂಧೆಕೋರರು…..ಭೀಮಾತೀರದಲ್ಲಿ ಸಂಚಲನ ಮೂಡಿಸಿದ ಸೋಮೇಶ….!

ಸರಕಾರ ನ್ಯೂಸ್‌ ಇಂಡಿ

ಭೀಮಾತೀರ ಖ್ಯಾತಿಯ ಇಂಡಿ ಭಾಗದಲ್ಲಿ ಅಕ್ರಮ ಮರಳು ದಂಧೆ ವಿರುದ್ಧ ಪಿಎಸ್‌ಪಿ ಸೋಮೇಶ ಗೆಜ್ಜಿ ಸಮರ ಮುಂದುವರಿದಿದ್ದು ಇದೀಗ ಮತ್ತೊಂದು ದಾಳಿ ನಡೆಸಿದ್ದಾರೆ.

ಇಂಡಿ ತಾಲೂಕಿನ  ಬರಗುಡಿ ಗ್ರಾಮದ ಬಳಿ ನಡೆದ ಕಾರ್ಯಾಚರಣೆ ಬಳಿಕ ಇದೀಗ ಅಂದರೆ ಆ. 31 ರಂದು ಮತ್ತೊಂದು ದಾಳಿ ನಡೆದಿದ್ದು, ಪ್ರಕರಣದಲ್ಲಿ ಮರಳು ಸಾಗಾಣಿಕೆದಾರ ಕಕ್ಕಾಬಿಕ್ಕಿಯಾಗಿ ಪಲಾಯನಗೊಂಡಿದ್ದಾನೆ.

ಬಂಗಾರದಂಗಡಿ ಮಾಲೀಕನಿಗೆ ಮಕಮಲ್‌ ಟೋಪಿ, ಮರಾಠಿಯಲ್ಲಿ ಮಾತಾಡಿ ಮರಳು ಮಾಡಿದಾಕೆ ಕದ್ದ ಚಿನ್ನವೆಷ್ಟು ಗೊತ್ತೆ?

ಹೌದು, ಪಡನೂರ ಗ್ರಾಮದ ಕನ್ನಶಾಲೆ ಬಳಿ ಗೂಡ್ಸ್‌ ವಾಹನ (ಕೆಎ-28, ಬಿ; 8492)ನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾಗ ಪಿಎಸ್‌ಐ ಸೋಮೇಶ ಗೆಜ್ಜಿ ನೇತೃತ್ವದ ತಂಡ ದಾಳಿ ನಡೆಸಿದೆ. ಖಾಕಿ ಪಡೆಯನ್ನು ಕಾಣುತ್ತಿದ್ದಂತೆ ಮರಳು ಸಾಗಾಣಿಕೆದಾರ ವಾಹನ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ವಾಹನ ಹಾಗೂ ಮರಳು ಸೇರಿದಂತೆ ಅಂದಾಜು 81 ಸಾವಿರ ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!