ವಿಜಯಪುರ

ಕತ್ನಳ್ಳಿ ಜಾತ್ರೆಯಲ್ಲೊಂದು ದಾಖಲೆ, ಬಾಸುಂದಿ ತಯಾರಿಕೆಗೆ ಬಳಸಿದ ಹಾಲು ಎಷ್ಟು ಗೊತ್ತಾ? ಇಲ್ಲಿದೆ ನೋಡಿ ವಿವರ

ವಿಜಯಪುರ: ಕಾಲಜ್ಞಾನಕ್ಕೆ ಹೆಸರಾದ ಕತಕನಹಳ್ಳಿ (ಕತ್ನಳ್ಳಿ)ಯ ಸದಾಶಿವ ಮುತ್ಯಾನ ಜಾತ್ರೆಯಲ್ಲೊಂದು ದಾಖಲೆ ಬರೆಯಲಾಗಿದೆ.
ಸೋಮವಾರ ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗಾಗಿ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪ್ರಸಾದದಲ್ಲಿ ಬಾಸುಂದಿ ಹಾಗೂ ಪೂರಿ ಮತ್ತಿತರ ಖಾದ್ಯಗಳು ಇರಲಿವೆ. ಈ ಬಾಸುಂದಿ ತಯಾರಿಕೆಗೆ ಬರೋಬ್ಬರಿ 8 ಸಾವಿರ ಲೀಟರ್ ಹಾಲು ಬಳಸುತ್ತಿರುವುದು ದಾಖಲೆಯೇ ಸರಿ.
ಗುರು ಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವದಂಗವಾಗಿ ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಜೊತೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಬಂದಿರುವ ಭಕ್ತ ಸಮೂಹಕ್ಕೆ ಪ್ರಸಾದ ವ್ಯವಸ್ಥೆ ಇರಲಿದೆ. ಈ ಬಾರಿ 8000 ಲೀಟರ್ ಹಾಲಿನಿಂದ ಬಾಸುಂದಿ ತಯಾರಿಸುತ್ತಿರುವುದು ಹುಬ್ಬೇರಿಸುವಂತೆ ಮಾಡಿದೆ.

error: Content is protected !!