ದೇವರನಿಂಬರಗಿಯಲ್ಲಿ ಹೃದಯ ವಿದ್ರಾವಕ ಘಟನೆ, ಬೀದಿಗೆ ಬಂದ ಬಡವನ ಬದುಕು….ಅಯ್ಯೋ ದುರ್ವಿಧಿಯೇ…..!
ವಿಜಯಪುರ: ಬೇಸಿಗೆ ಬಂತೆಂದರೆ ಸಾಕು ಒಂದಿಲ್ಲಾ ಒಂದು ಬೆಂಕಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ.
ಅಂಥದ್ದೇ ಒಂದು ಅವಘಡ ಚಡಚಣ ತಾಲೂಕಿನ ದೇವರನಿಂಬರಗಿಯಲ್ಲಿ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ತಗಡಿನ ಶೆಡ್ ಗೆ ಬೆಂಕಿ ಹೊತ್ತಿಕೊಂಡಿದೆ. ತೋಟದ ವಸ್ತಿಯಲ್ಲಿರುವ ಮನೆ ಬೆಂಕಿಗಾಹುತಿಯಾಗಿದೆ. ರಾಜೇಸಾಬ ಬಾಷಾಸಾಬ ಬರಡೋಲ ಎಂಬುವರ ಮನೆ ಇದಾಗಿದ್ದು, ಮನೆಯಲ್ಲಿದ್ದ ಚಿನ್ನಾಭರಣ, 70 ಸಾವಿರ ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳು ಭಸ್ಮವಾಗಿವೆ. ಸುಮಾರು 4 ಲಕ್ಷಕ್ಕಿಂತ ಹೆಚ್ಚು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.