ವಿಜಯಪುರ

ಭೀಮಾ ತೀರದಲ್ಲಿ ಗುಂಡಿನ ದಾಳಿ, ಹಂತಕರ ದಾಳಿಗೆ ಸ್ಥಳದಲ್ಲೇ ಹಾರಿ ಹೋಯಿತು ಪ್ರಾಣ ಪಕ್ಷಿ !!!

ಸರಕಾರ ನ್ಯೂಸ್ ಚಡಚಣ

ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಹಂತಕನ ಗುಂಡೇಟಿಗೆ ಓರ್ವನ ಪ್ರಾಣ ಪಕ್ಷಿ ಹಾರಿ ಹೋಗಿದೆ !

ಚಡಚಣ ಪಟ್ಟಣದ ನೀವರಗಿ ರಸ್ತೆ ಬಳಿ ಭಾನುವಾರ ಗುಂಡಿನ ದಾಳಿ ನಡೆದಿದೆ‌. ಘಟನೆಯಲ್ಲಿ ಚಡಚಣ ಪಟ್ಟಣದ ವಾರ್ಡ್ ನಂಬರ್ 2 ರ ಬಿಜೆಪಿ ಸದಸ್ಯೆಯ ಪತಿ ಅಶೋಕ ಮಲ್ಲಪ್ಪ ಗಂಟಗಲ್ಲಿ ಎಂಬಾತ ಅಸುನೀಗಿದ್ದಾನೆ.

ಅಶೋಕ ಮನೆಯ ಬಳಿ ಇದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ರೌಡಿ ಶೀಟರ್ ಆಗಿದ್ದ ಅಶೋಕ ಇತ್ತೀಚೆಗಷ್ಟೆ ಪೆರೋಲ್ ಮೇಲೆ ಹೊರ ಬಂದಿದ್ದನು‌. ಮನೆಯಿಂದ ಚಡಚಣ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಈ ದಾಳಿ ನಡೆದಿದೆ.

ಅಶೋಕ‌ ಬೆನ್ನಿಗೆ ಮೂರಕ್ಕೂ ಅಧಿಕ ಗುಂಡುಗಳು ತಾಗಿದ್ದು ಸ್ಥಳದಲ್ಲೇ ಮೃತಪಟ್ಟನು.

ಕೊಲೆ ಹಾಗೂ ಇತರೆ ಕೇಸ್ ಗಳಲ್ಲಿ ಅಪರಾಧಿಯಾಗಿದ್ದ
ಅಶೋಕ ಮೇಲಿನ ಹಳೆ ದ್ವೇಷದಿಂದ ಕೊಲೆ ಮಾಡಿರೋ ಸಂಶಯ ವ್ಯಕ್ತವಾಗಿದೆ.

ಚಡಚಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!