ಬಸ್ – ಬೈಕ್ ಮಧ್ಯೆ ಭೀಕರ ಅಪಘಾತ, ಇಬ್ಬರ ಸಾವು, ಎಲ್ಲಿ? ಹೇಗಾಯಿತು?
ಸರಕಾರ ನ್ಯೂಸ್ ವಿಜಯಪುರ
ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ತಿಕೋಟಾ – ವಿಜಯಪುರ ಮಧ್ಯೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ ಇಂಥದ್ದೇ ಪ್ರಕರಣ ದಲ್ಲಿ ಇಬ್ಬರು ಅಸುನೀಗಿದ್ದಾರೆ.
ತಿಕೋಟಾ ಬಳಿಯ ರತ್ನಾಪುರ ಗ್ರಾಮದ ಬಳಿ ಬಸ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಇಬ್ಬರು ಅಸುನೀಗಿದ್ದಾರೆ.
ಮೃತರನ್ನು ವಿಜಯಪುರ ನಗರ ನಿವಾಸಿ ಶಾಹೀನಾ ವಾಲೀಕಾರ ಹಾಗೂ ಸಲೀಂ ವಾಲೀಕಾರ ದಂಪತಿ ಎಂದು ಗುರುತಿಸಲಾಗಿದೆ.
ರತ್ನಾಗಿರಿಯಿಂದ ವಿಜಯಪುರಕ್ಕೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದರಿಂದ ಸ್ಥಳದಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ.
ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)