ಶಾಸಕ ಯತ್ನಾಳಗೆ ಎಂ.ಬಿ. ಪಾಟೀಲ ತಿರುಗೇಟು, ನಿಮ್ಮ ಸೋಲಿಗೆ ಒಬ್ಬ ಎಂಬಿ ಸಾಕು !
ಸರಕಾರ್ ನ್ಯೂಸ್ ವಿಜಯಪುರ
ಬಿಜೆಪಿ ಶಾಸಕ ಬಸನಗೌಡ ಪಾಟೀಲರನ್ನು ಸೋಲಿಸಲು ಹತ್ತಲ್ಲ ಒಬ್ಬ ಎಂ.ಬಿ. ಪಾಟೀಲ ಸಾಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ ತಿರುಗೇಟು ನೀಡಿದ್ದಾರೆ.
ಈಚೆಗಷ್ಟೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಂ.ಬಿ. ಪಾಟೀಲರ ವಿರುದ್ಧ ಕಿಡಿ ಕಾರುತ್ತ ಹತ್ತು ಎಂ.ಬಿ. ಪಾಟೀಲ ಬಂದರೂ ತಮ್ಮನ್ನು ಸೋಲಿಸಲು ಆಗಲ್ಲ ಎಂದಿದ್ದರು. ಇದೀಗ ಯತ್ನಾಳ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಂ.ಬಿ. ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಸೋಲಿಸಲು ಒಬ್ಬನೇ ಒಬ್ಬ ಎಂ.ಬಿ. ಪಾಟೀಲ ಸಾಕು ಎಂದು ಶಾಸಕ ಎಂ.ಬಿ. ಪಾಟೀಲ ತಿರುಗೇಟು ನೀಡಿದ್ದಾರೆ. ಅಲ್ಲದೇ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ.
ಈ ಹಿಂದೆ ಉಸ್ತಾದ ಅವರನ್ನು ಹಾಗೂ ಡಾ.ಮಕ್ಬುಲ್ ಬಾಗವಾನರನ್ನು ಗೆಲ್ಲಿಸಿದ್ದು ಗಮನಕ್ಕಿಲ್ಲವಾ? ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಕಾಂಗ್ರೆಸ್ ಅಧಿಕಾರ ಹಿಡಿದಿಲ್ಲವಾ? ಎಂದು ಎಂ.ಬಿ.ಪಾಟೀಲ ಪ್ರಶ್ನಿಸಿದ್ದಾರೆ.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕೆಲವು ಲೋಪದೋಷಗಳಾಗಿದ್ದು, ಅದನ್ನು ಸರಿಪಡಿಸಿಕೊಂಡು ಈ ಬಾರಿ ಚುನಾವಣೆ ಎದುರಿಸಲಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ ಶಾಸಕರು ಮತ್ತು ಮಾಜಿ ಶಾಸಕರೇ ಎಂ.ಬಿ. ಪಾಟೀಲರನ್ನು ಸೋಲಿಸಲು ಸಜ್ಜಾಗಿದ್ದಾರೆ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲರು, ಕಾಂಗ್ರೆಸ್‌ನಲ್ಲಿ ಅಂಥ ಯಾವುದೇ ಸ್ಥಿತಿ ನಿರ್ಮಾಣವಾಗಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)