ತೋಟದ ವಸತಿಯಲ್ಲಿ ನಡೆಯಿತು ಕಳ್ಳತನ, ಮನೆಗೆ ಬಂದ ರೈತನಿಗೆ ಶಾಕ್ !
ಸರಕಾರ್ ನ್ಯೂಸ್ ಚಡಚಣ
ಮನೆಯ ಟ್ರೆಜರಿ ಮುರಿದು ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ಚಡಚಣ ತಾಲೂಕಿನ ಶಿರಾಡೋಣ ಗ್ರಾಮದ ತೋಟದ ವಸತಿಯಲ್ಲಿ ನಡೆದಿದೆ.
ಇಲ್ಲಿನ ಹುಲಜಂತಿ ರಸ್ತೆಯಲ್ಲಿರುವ ಶ್ರೀಮಂತ ಭರಮಣ್ಣ ನರೋಟೆ ಎಂಬುವರ ತೋಟದ ಮನೆಯಲ್ಲಿ ಕಳ್ಳತನ ನಡೆದಿದ್ದು, ಡಿ.4ರಂದು ಶ್ರೀಮಂತ ಚಡಚಣ ಠಾಣೆಗೆ ದೂರು ನೀಡಿದ್ದಾರೆ. ಅಂದಾಜು 70 ಸಾವಿರ ರೂ.ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ಶ್ರೀಮಂತ ತಿಳಿಸಿದ್ದಾರೆ.
ಪ್ರಕರಣದ ವಿವರ:
ಡಿ. 1ರಂದು ಮಧ್ಯಾಹ್ನ 1.30ರ ಸುಮಾರಿಗೆ ಶ್ರೀಮಂತ ಬೀಸುವ ಸಲುವಾಗಿ ಶಿರಾಡೋಣ ಗ್ರಾಮಕ್ಕೆ ತೆರಳಿದ್ದನು. ಮನೆಯಲ್ಲಿದ್ದ ಹೆಣ್ಣು ಮಕ್ಕಳು ಮೆಕ್ಕೆ ಜೋಳ ಬೆಳೆಗೆ ಗೊಬ್ಬರ ಹಾಕಲು ಹೋಗಿದ್ದರು. ಮೊಮ್ಮಕ್ಕಳು ಶಾಲೆಗೆ ತೆರಳಿದ್ದರು. ಶ್ರೀಮಂತ ಬೀಸಿಕೊಂಡು ಮರಳಿ ಮನೆಗೆ ಬರುವಷ್ಟರಲ್ಲಿ ಮನೆಯ ಹೆಣ್ಣು ಮಕ್ಕಳೆಲ್ಲರು ಹೊರಗೆ ಕುಳಿತು ಅಳುತ್ತಿದ್ದರು. ಇದನ್ನು ಕಂಡ ಶ್ರೀಮಂತ ಮನೆಯವರನ್ನು ವಿಚಾರಿಸಲಾಗಿ ಮನೆಯಲ್ಲಿನ ಟ್ರೆಜರಿಯಲ್ಲಿ ಇಟ್ಟಿರುವ ಚಿನ್ನಾಭರಣ ಕಳುವಾಗಿದ್ದಾಗಿ ತಿಳಿಸಿದರು. ಒಳಗೆ ಹೋಗಿ ನೋಡಲಾಗಿ ಟ್ರೆಜರಿ ಬಾಗಿಲುಗಳನ್ನು ಮೇಟಿ ತೆಗೆದಿದ್ದು, ಒಳಗಿದ್ದ ಚಿನ್ನಾಭರಣ ಕಳ್ಳತನವಾಗಿತ್ತು.
ಏನೇನು ಕಳವು?
1.5 ತೊಲ ಚಿನ್ನದ ನಕ್ಲೆಸ್, 1 ತೊಲ ಬಂಗಾರದ ಬೋರಮಾಳ, 0.75 ತೊಲೆ ಚಿನ್ನದ ಎಕ್ಸರಾ, 1 ತೊಲೆ ಚಿನ್ನದ ಲಾಕೀಟ, 0.5 ತೊಲೆ ಬಂಗಾರದ ಕಿವಿ ಪಟ್ಟಿ ಝುಮಕಿ ಹಾಗೂ 4 ಮಾಸಿ ಬಂಗಾರದ ಕುಡಕಿ ಸೇರಿ ಅಂದಾಜು 70 ಸಾವಿರ ರೂ.ಮೌಲ್ಯದ ಬಂಗಾರದ ಆಭರಣ ಕಳುವಾಗಿದೆ ಎಂದು ಶ್ರೀಮಂತ ದೂರಿನಲ್ಲಿ ತಿಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)