ಬಾಯಿಯಲ್ಲಿ ಟವೆಲ್ ತುರುಕಿ ಬಲಾತ್ಕಾರಕ್ಕೆ ಯತ್ನ, ವಿಚಾರಿಸಲು ಹೋದಾಗ ಆಗಿದ್ದೇನು ಗೊತ್ತಾ?
ಸರಕಾರ್ ನ್ಯೂಸ್ ತಾಳಿಕೋಟಿ
ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತಿಕ್ರಮ ಪ್ರವೇಶ ಮಾಡಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ತಾಳಿಕೋಟಿ ತಾಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಮಹಾದೇವಿ ಲಕ್ಷ್ಮಣ ತಿಳಗುಳ (34) ಎಂಬುವರ ಮೇಲೆ ಶುಕ್ರವಾರವೇ ಈ ಕೃತ್ಯ ನಡೆದಿದ್ದು ಇದೀಗ ಅಂದರೆ ಡಿ. 4ರಂದು ಕಲಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದೇ ಗ್ರಾಮದ ಬಸವರಾಜ ಭೀಮರಾಯ ತಿಳಗೂಳ ಕೃತ್ಯ ಎಸಗಿದ ಆರೋಪಿ.
ಪ್ರಕರಣದ ವಿವರ:
ಮಹಾದೇವಿ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ನುಗ್ಗಿದ ಬಸವರಾಜ ಅವಳನ್ನು ತಬ್ಬಿಕೊಂಡು ಬಾಯಲ್ಲಿ ಟವೆಲ್ ತುರುಕಿ ಬಲಾತ್ಕಾರ ಮಾಡಲು ಯತ್ನಿಸಿದರು. ಆಗ ಮಹಾದೇವಿ ಧೈರ್ಯ ಸಾಲದೇ ಚೀರಲು ಆಗದೆ ಕೆಳಗೆ ಬಿದ್ದಾಗ ಬಹಳ ದಿನಗಳಿಂದ ನಿನ್ನ ಮೇಲೆ ಕಣ್ಣು ಇಟ್ಟಿದ್ದೆ. ಈವೊತ್ತು ಸಿಕ್ಕಿ ನಿನ್ನ ಬಿಡುವುದಿಲ್ಲ ಎಂದು ಮೈಮೇಲೆ ಬಿದ್ದು ಬಲಾತ್ಕಾರಕ್ಕೆ ಪ್ರಯತ್ನ ಮಾಡುತ್ತಿದ್ದಾಗ, ಮಹಾದೇವಿಯ ಮೈದುನನ ಹೆಂಡತಿ ಲಕ್ಷ್ಮಿ ಮನೆಗೆ ಬಂದಿದ್ದಾಳೆ. ಆಗ ಆರೋಪಿ ಓಡಿ ಹೋಗಿದ್ದಾನೆ. ಬಳಿಕ ಮಹಾದೇವಿ ಹಾಗೂ ಆಕೆ ಗಂಡ ಲಕ್ಷ್ಮಣ ಬಸವರಾಜನ ಮನೆಗೆ ಹೋಗಿ ವಿಚಾರಿಸಿದಾಗ ಬಸವರಾಜನ ಮನೆಯವರಾದ ಸರಸ್ವತಿ, ಸಂತೋಷ, ರೇಣುಕಾ, ಮಂಜುನಾಥ, ಹಣಮಂತ, ಗೌರಪ್ಪ ಸೇರಿ ಹಲ್ಲೆ ನಡೆಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)