ಗೋಳಗುಮ್ಮಟ ಮೇಲಿಂದ ಬಿದ್ದ ವ್ಯಕ್ತಿಯ ಅಸಲಿ ಕಥೆ ಏನು? ಇಲ್ಲಿದೆ ಡಿಟೇಲ್ಸ್…
ಸರಕಾರ್ ನ್ಯೂಸ್ ವಿಜಯಪುರ
ಇದೇ ನ.16ರಂದು ಅಂದರೆ ಬುಧವಾರ ಐತಿಹಾಸಿಕ ಗೋಳಗುಮ್ಮಟ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಅಸಲಿ ಕಥೆ ಏನು? ಘಟನೆಗೆ ಕಾರಣವೇನು? ಆ ವ್ಯಕ್ತಿಯ ಹಿನ್ನೆಲೆ ಏನು? ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಮನೆ ಮಾಡಿದೆ.
ಇದೀಗ ಮೃತ ವ್ಯಕ್ತಿಯ ಬಗ್ಗೆ ದೂರಿನಲ್ಲಿ ದಾಖಲಿಸಲಾಗಿದ್ದು ಆ ಪ್ರಕಾರ ಮೃತ ವ್ಯಕ್ತಿ ಸಲೀಂ ಸಾಹೇಬಲಾಲ ಹೊನವಾಡ ಆಗಿದ್ದು, ಅಲ್ ಅಮೀನ್ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದನು. ಜೊತೆಗೆ ಜಮೀನುಗಳ ಮತ್ತು ಪ್ಲಾಟ್‌ಗಳ ವ್ಯವಹಾರ ಕೂಡ ಮಾಡುತ್ತಿದ್ದನು. ಈ ವ್ಯವಹಾರವೇ ಆತನ ಸಾವಿಗೆ ಕಾರಣವಾಗಿದೆ ಎಂದು ಸಲೀಮ್ ಪತ್ನಿ ರಜಿಯಾಬೇಗಂ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ವಿವರ:
ಸಲೀಂ ಹೊನವಾಡ ಈತ ಮಾನಿಂಗಪ್ಪ ಮಂಟೂರ, ಝಾಕೀರ ಇಂಡಿಕರ, ನಾಮದೇವ ರಾಠೋಡ, ಫೈರೋಜ್ ಸಂಕ ಇವರೊಂದಿಗೆ ದುಡ್ಡಿನ ವ್ಯವಹಾರ ಹೊಂದಿದ್ದನು. ಇವರು ಸಲೀಂನಿಂದ ಹಣ ಪಡೆದು ವಾಪಸ್ ಕೊಡದೇ ಸತಾಯಿಸುತ್ತಿದ್ದರು. ಸಲೀಂ ಹೊನವಾಡ ಈತ ಮುಳವಾಡ ತಾಂಡಾದ ನಾಮದೇವ ರಾಠೋಡ ಇವರಿಂದ ಫೈರೋಜ್ ಅಬ್ದುಲ್‌ರಜಾಕಸಾಬ ಸಂಖ ಇವರಿಗೆ 25 ಲಕ್ಷ ರೂ. ಕೈಗಡ ಹಣ ಕೊಡಿಸಿದ್ದು, ಈ ವ್ಯವಹಾರಕ್ಕೆ ಮಧ್ಯಸ್ಥಿಕೆ ಕೂಡ ವಹಿಸಿದ್ದನು. ಸಲೀಂನು ನಾಮೇವ ರಾಠೋಡ ಇವರಿಂದ ಫೈರೋಜ್ ಸಂಖ ಇವರ ವ್ಯವಹಾರದಲ್ಲಿ ಮಧ್ಯಸ್ಥಿಕೆಗಾರನಾಗಿದ್ದಕ್ಕಾಗಿ ನಾಮದೇವ ಹಣ ಕೊಡಿಸು ಇಲ್ಲ ಅಂದರೆ ನೀನೇ ಕೊಡು ಎಂದು ಮೃತ ಸಲೀಮ್‌ಗೆ ಕಾಡುತ್ತಿದ್ದನು. ಇದನ್ನು ಫೈರೋಜ್ ಸಂಕಗೆ ತಿಳಿಸಿದರೂ ಆತ ಹಣ ಇಲ್ಲ ಏನ್ ಮಾಡಕೋತಿ ಮಾಡಕೋ ಎಂದು ಹೇಳಿದ್ದನು. ಇದರಿಂದ ತಿಂಗಳಗಟ್ಟಲೇ ಸಲೀಮ್ ಊಟ, ನಿದ್ರೆ ಬಿಟ್ಟು ಮಾನಸಿಕವಾಗಿ ಕುಗ್ಗಿ ಹೋಗಿ ಗೋಳಗುಮ್ಮಟದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಲೀಂನ ಪತ್ನಿ ರಜಿಯಾ ಬೇಗಂ ದಖನಿ ದೂರಿನಲ್ಲಿ ತಿಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)