ವಿಡಿಸಿಸಿ ಬ್ಯಾಂಕ್‌ನಲ್ಲಿ ಬೇರೊಬ್ಬರ ವ್ಯಕ್ತಿ ಹೆಸರಲ್ಲಿ ಸಾಲ, ದಾಖಲೆಕೊಟ್ಟು ಮೋಸಹೋದ ಅಮಾಯಕ ! ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ
ಸರಕಾರ್ ನ್ಯೂಸ್ ವಿಜಯಪುರ
ಹಣಕಾಸಿನ ಅಡಚಣೆಗಾಗಿ ಸಾಲ ತೆಗೆದುಕೊಳ್ಳಲು ಹೋದ ವ್ಯಕ್ತಿಯಿಂದ ದಾಖಲೆ ಪಡೆದು ಅದರ ಮೇಲೆ ಗೊತ್ತಿಲ್ಲದಂತೆ 11 ಲಕ್ಷ ರೂ. ಸಾಲ ಪಡೆದು ಯಾಮಾರಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ವಿಜಯಪುರದ ಬಸವೇಶ್ವರ ವೃತ್ತದಲ್ಲಿರುವ ವಿಡಿಸಿಸಿ ಬ್ಯಾಂಕ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದ್ದ, ಮಠಪತಿ ಗಲ್ಲಿಯ ನಿವಾಸಿ ಅರವಿಂದ ಕೃಷ್ಣ ಕಾಳಿ ಎಂಬಾತ ವಂಚನೆಗೆ ಒಳಗಾಗಿದ್ದಾನೆ. ಈತನ ಹೆಸರಲ್ಲಿ ಖಾತೆ ತೆರೆದು 11 ಲಕ್ಷ ರೂ. ಸಾಲ ತೆಗೆದಿದ್ದು, ಬ್ಯಾಂಕ್‌ನಿಂದ ನೋಟಿಸ್ ಬಂದಾಗಲೇ ವಂಚನೆಯ ಅರಿವಾಗಿದೆ.
ಪ್ರಕರಣದ ವಿವರ:
ಕಳೆದ 2021 ಫೆಬ್ರವರಿ 15ರಂದು ಬೆಳಗ್ಗೆ 11ಕ್ಕೆ ಅರವಿಂದ ಸ್ವಂತ ಬ್ಯಾಂಕ್‌ನ ಕೆಲಸಕ್ಕಾಗಿ ಹಾಗೂ ಪ್ರಾಪಂಚಿಕ ಅಡಚಣೆಗಾಗಿ ಸಾಲ ಪಡೆಯಲೆಂದು ಬಸವೇಶ್ವರ ವೃತ್ತದಲ್ಲಿರುವ ವಿಡಿಸಿಸಿ ಬ್ಯಾಂಕ್‌ಗೆ ಹೋಗಿದ್ದಾನೆ. ಆಗ ಸ್ಥಳೀಯ ದಿವಟೇರಿ ಗಲ್ಲಿಯ ನಿವಾಸಿ ಶಿವಕುಮಾರ ನಿಂಗೊಂಡ ಚಿಕ್ಕೋಡಿ ಎಂಬಾತ ಪರಿಚಯವಾಗಿದ್ದು, ಸಾಲ ಕೊಡಿಸುವುದಾಗಿ ಹೇಳಿ ಅರವಿಂದನ ಆಧಾರ್ ಕಾರ್ಡ್, ಫೋಟೊ ಹಾಗೂ ಮನೆ (ಆಸ್ತಿ)ಯ ಉತಾರೆ ಪಡೆದುಕೊಂಡು ಸಾಲ ಮಂಜೂರಿ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿ ಹೋಗಿದ್ದಾನೆ. ಬಳಿಕ ಭೇಟಿಯಾಗದೇ ಇದ್ದಾಗ ಕಳೆದ ತಿಂಗಳು ಅಕ್ಟೋಬರ್ 2022ಲ್ಲೆ ಏಕಾಏಕಿ ಬ್ಯಾಂಕ್‌ನಿಂದ ನೋಟಿಸ್ ಜಾರಿಯಾಗಿದೆ. ಆ ಪ್ರಕಾರ ಅರವಿಂದ ಬ್ಯಾಂಕ್ ನ ಸಾಲಗಾರನಾಗಿದ್ದು, ಹಣ ಪಾವತಿಯಾಗದೇ ಕಟ್‌ಬಾಕಿ ಆಗಿದ್ದು, ಆಸ್ತಿ ಹರಾಜು ಹಾಗೂ ಮನೆ ಜಫ್ತಿ ಮಾಡುವ ಬಗ್ಗೆ ತಿಳಿಸಲಾಗಿದೆ.
ನಕಲಿ ದಾಖಲೆ ಸೃಷ್ಠಿ:
ಅರವಿಂದನ ಆಧಾರ್ ಕಾಡ್, ಫೋಟೊ ಹಾಗೂ ಆಸ್ತಿ ಉತಾರೆ ಕಾಗದಪತ್ರಗಳ ಜೊತೆಗೆ ಇನ್ನೂ ಕೆಲವು ನಕಲಿ ದಾಖಲೆ ಸೃಷ್ಠಿಸಿ ಖೊಟ್ಟಿ ಸಹಿ ಮಾಡಿ ಬ್ಯಾಂಕ್‌ಗೆ ನೈಜವೆಂದು ಸಲ್ಲಿಸಿ 11 ಲಕ್ಷ ರೂ. ಸಾಲ ಪಡೆಯಲಾಗಿದೆ. ಆ ಸಾಲವನ್ನು ಆರೋಪಿ ಶಿವಕುಮಾರ ಚಿಕ್ಕೋಡಿಯೇ ಪಡೆದಿದ್ದು, ತನಗೆ ನೀಡಿಲ್ಲವೆಂದು ಅರವಿಂದ ಗಾಂಧಿ ಚೌಕ್ ಠಾಣೆಗೆ ನ.15ರಂದು ದೂರು ನೀಡಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)