ಎಂಬಿಬಿಎಸ್ ವಿದ್ಯಾರ್ಥಿಗೂ ಪಂಗನಾಮ, ಲಕ್ಷ ಲಕ್ಷ ಹಣ ಮಂಗಮಾಯ ! ಇದು ವೆರಿ ಇಂಟ್ರೆಸ್ಟಿಂಗ್ ಕೇಸ್
ಸರಕಾರ್ ನ್ಯೂಸ್ ವಿಜಯಪುರ
ಫೇಸ್‌ಬುಕ್, ಮೆಸೆಂಜರ್, ಆನ್‌ಲೈನ್ ಬ್ಯಾಂಕಿಂಗ್ ಹೀಗೆ ಮುಂತಾದ ತಂತ್ರಜ್ಞಾನಗಳ ಮೂಲಕ ಮೋಸ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್ ಖಾತೆ ವಿವರವನ್ನು ಯಾರಿಗೂ ನೀಡಬೇಡಿ ಎಂದು ಸೈಬರ್ ಕ್ರೈಮ್ ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಎಚ್ಚರಿಸುತ್ತಿದ್ದರೂ ಯಾಮಾರುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ!
ಅಂದಹಾಗೆ, ಕಳೆದೆರಡು ದಿನಗಳ ಹಿಂದೆ ವ್ಯಕ್ತಿಯೋರ್ವ ಫೇಸ್‌ಬುಕ್ ಗೆಳತಿಯನ್ನು ನಂಬಿ 39 ಲಕ್ಷ ರೂ. ಕಳೆದುಕೊಂಡಂತೆ ಇದೀಗ ಮತ್ತೋರ್ವ ಮೊಬೈಲ್ ನಂಬರ್‌ಗೆ ಬಂದ ಅನಾಮದೇಯ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ವಿವರ ನೀಡುವ ಮೂಲಕ ಹಣ ಕಳೆದುಕೊಂಡಿದ್ದಾನೆ.
ಎಂಬಿಬಿಎಸ್ ವಿದ್ಯಾರ್ಥಿ:
ವಿಜಯಪುರದ ಕಾಸಗೇರಿ ಓಣಿಯ ನಿವಾಸಿ ವಿನಾಯಕ ರಾಜು ತೇಲಿ ಎಂಬಾತ ಹಣ ಕಳೆದುಕೊಂಡಿದ್ದಾರೆ. ಬೀದರನ ಸರ್ಕಾರಿ ಮಹಾವಿದ್ಯಾಲಯದಲ್ಲಿದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ರಾಜುಗೆ ಅ. 16ರಂದು ಅನಾಮಧೇಯ ಮೊಬೈಲ್ ಸಂಖ್ಯೆಯಿಂದ ಲಿಂಕ್ ಬಂದಿದೆ. ಓಪನ್ ಮಾಡಲಾಗಿ ಬ್ಯಾಂಕ್ ವಿವರ ಕೇಳಿದೆ. ಆ ಪ್ರಕಾರ ಬ್ಯಾಂಕ್ ವಿವರ ನೀಡಲಾಗಿ ಖಾತೆಯಿಂದ ಹಣ ಎಗರಿಸಲಾಗಿದೆ.
ನಾಲ್ಕು ಲಕ್ಷಕ್ಕೂ ಅಧಿಕ ಹಣ ಮಾಯ:
ನ.2ರಂದು ರಾಜು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲಾಗಿ ಹಣ ಕಡಿಮೆಯಿರುವುದು ಗೊತ್ತಾಗಿದೆ. ಖಾತೆಯ ಸ್ಟೇಟ್‌ಮೆಂಟ್ ತೆಗೆಯಿಸಿ ನೋಡಲಾಗಿ ಹಂತ ಹಂತವಾಗಿ ಹಣ ತೆಗೆದಿರುವುದು ಗಮನಕ್ಕೆ ಬಂದಿದೆ. ಒಟ್ಟು 45,4000 ರೂ. ಖಾತೆಯಿಂದ ಕಡಿತವಾಗಿದೆ. ಯಾರೋ ಮೋಸದಿಂದ ಹಣವನ್ನು ತಮ್ಮ ಖಾತೆಗೆ ವರ್ಗ ಮಾಡಿಕೊಂಡಿರುವುದು ಗೊತ್ತಾಗಿ ಇದೀಗ ಅಂದರೆ ನ.15ರಂದು ವಿಜಯಪುರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)