ನಮ್ಮ ವಿಜಯಪುರ

ಬಿಜೆಪಿ ಜಿಲ್ಲಾಧ್ಯಕ್ಷ ಶೃಂಗಾರ ಗೊಂಬಿ, ಯತ್ನಾಳ ಹಿಟ್ಲರ್ ಅಂತೆ….!

ಸರಕಾರ್ ನ್ಯೂಸ್ ವಿಜಯಪುರ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಬ್ಬ ಹಿಟ್ಲರ್…. ಹುಲಿಯೂ ಅಲ್ಲ ಹೆಬ್ಬುಲಿಯೂ ಅದೊಂದು ಹುಳು…..ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗಾರ ಗೊಂಬಿ….ಅಂತೆ….!

ಏನಿದು ಆರೋಪ, ಯಾರು ಹೀಗೆ ಹೇಳಿದ್ದು ಅಂತೀರಾ….? ಇಲ್ಲಿದೆ ನೋಡಿ ರೋಚಕ ಸ್ಟೇಟಮೆಂಟ್ಸ್.

ಯತ್ನಾಳ ಮತ್ತು ಕೂಚಬಾಳಗೆ ಯಾವುದೇ ತತ್ವ ಸಿದ್ದಾಂತ ಇಲ್ಲ. ಹಾಗಿದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಮಹಾನಗರ ಪಾಲಿಕೆಯ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಸವಾಲು ಎಸೆದರು.

ಮುಖಂಡ ರವಿಕಾಂತ ಬಗಲಿ ಮಾತನಾಡಿ,
ಯತ್ನಾಳ ಹಾಗೂ ಜಿಲ್ಲಾಧ್ಯಕ್ಷ‌ ಕೂಚಬಾಳಗೆ ಯಾವುದೇ ತತ್ವ, ಸಿದ್ದಾಂತ ಇಲ್ಲ. ಇವರ ಹಿಟ್ಲರ್ ಸಂಸ್ಕೃತಿಯಿಂದ ಪ್ರಾಮಾಣಿಕ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎಂದರು.

ಸಾಲು ಸಾಲು ಪ್ರಶ್ನೆ:

ಬಿಜೆಪಿ‌ ಜಿಲ್ಲಾಧ್ಯಕ್ಷರು ಬಂಡಾಯ ಅಭ್ಯರ್ಥಿಗಳು ಪಕ್ಷಕ್ಕೆ ರಾಜೀನಾಮೆ ಕೊಟ್ಟ ಬಳಿಕ ಉಚ್ಚಾಟನೆ ಮಾಡಿದ್ದು ಸರಿಯೇ? ಪಕ್ಷದ ಕಾರ್ಯಕರ್ತರಲ್ಲದವರಿಗೆ ಟಿಕೆಟ್ ನೀಡಿದ್ದು ಸರಿಯೇ? ಪಕ್ಷದ ಸಿದ್ಧಾಂತ ಮೊದಲು ದೇಶ, ನಂತರ ಪಕ್ಷ ಬಳಿಕ ವ್ಯಕ್ತಿ ಎನ್ನುವ ಸಿದ್ಧಾಂತ ಉಳಿದಿದೆಯೇ? ವ್ಯಕ್ತಿಗತವಾಗಿ ಗುರುತಿಸಿ ಟಿಕೆಟ್ ನೀಡಿದರೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು? ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷರು ಅಸಮರ್ಥರು. ಪಕ್ಷದ ಸಿದ್ದಾಂತ ಗಾಳಿಗೆ ತೂರಿ ಮೊದಲು ವ್ಯಕ್ತಿ ಎನ್ನುವ ಸಿದ್ಧಾಂತಕ್ಕೆ ಜೋತು ಬಿದ್ದಿದ್ದೀರಿ….ಹೀಗಾಗಿ ಪಕ್ಷಕ್ಕಾಗಿ ಪ್ರಾಮಾಣಿಕತೆ ತೋರದ ನೀವು ಆ ಸ್ಥಾನದಲ್ಲಿ ಮುಂದುರಿಯಲು ಅರ್ಹರಲ್ಲ ಎಂದರು.

ಯತ್ನಾಳರ ತಕ್ಕತ್ತು ಇಷ್ಟೇನಾ?:

ಮುಂದುವರಿದು, ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡ್ ಗಳಲ್ಲಿ 5 ನಾಗಠಾಣಕ್ಕೆ ಬರುತ್ತವೆ.
ನಗರ ಕ್ಷೇತ್ರದಲ್ಲಿ ಶಾಸಕ ಯತ್ನಾಳರಿಗೆ 24 ಟಿಕೆಟ್ ಹಂಚಿದ್ದು ಅದರಲ್ಲಿ 9 ಜನ ಮಾತ್ರ ಆಯ್ಕೆಯಾಗಿದ್ದಾರೆ. ಐವರು ಬಿಜೆಪಿ ಅಭ್ಯರ್ಥಿಗಳು ತಮ್ಮ ಸ್ವಂತ ಬಲ ಹಾಗೂ ಪಕ್ಷದ ಆಧಾರದ ಮೇಲೆ ಗೆದ್ದಿದ್ದಾರೆ. ಅದು ಅವರ ಪ್ರಾಮಾಣಿಕ ಸೇವೆ ಮತ್ತು ಪಕ್ಷ ಸಂಘಟನೆಗೆ ಸಿಕ್ಕ ಗೆಲುವು. ಹೀಗಾಗಿ ಯತ್ನಾಳ ಟಿಕೆಟ್ ಕೊಡಿಸಿದ ಪೈಕಿ ಗೆದ್ದವರು ಕೇವಲ 9 ಸ್ಥಾನ ಮಾತ್ರ. ಇದು ಯತ್ನಾಳ ರ ಯೋಗ್ಯತೆ ಎಂದರು.

ಇನ್ನು ಎರಡು ವಾರ್ಡ್ ಗಳಿಗೆ ಟಿಕೆಟ್ ಕೊಟ್ಟಿಲ್ಲ. ಕಾರಣ ಕೇಳಿದರೆ ಯೋಗ್ಯ ಅಭ್ಯರ್ಥಿ ಸಿಕ್ಕಿಲ್ಲ ಎನ್ನುತ್ತಾರೆ. ಜಾತಿ ಲೆಕ್ಕಾಚಾರ ಮುಂದೆ ತರುತ್ತಾರೆ. ಯಾವುದೇ ವಾರ್ಡ್ ನಲ್ಲಿ ಪರಿಪೂರ್ಣವಾಗಿ ಮುಸ್ಲಿಂರಿಲ್ಲ. ಹಾಗಿದ್ದರೂ ಹಿಂದುಗಳಿಗೆ ಟಿಕೆಟ್ ನೀಡಿ ಗೆಲ್ಲಿಸಿ ತರಬೇಕಿತ್ತು. ಇದು ನಿಮ್ಮ ಸಂಘಟನೆಯ ದೌರ್ಬಲ್ಯ ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದರು.

ಇನ್ನು ಚುನಾವಣೆಯಲ್ಲಿ ಬಿಜೆಪಿ-47759,
ಕಾಂಗ್ರೆಸ್- 40124
ಜೆಡಿಎಸ್- 9717
ಆಮ್ ಆದ್ಮಿ-4323
ನೋಟಾ-1081 ಮತಗಳಿಸಿದ್ದು ಇದರಲ್ಲಿ ಬಿಜೆಪಿಯು ಪಕ್ಷೇತರ ಅಭ್ಯರ್ಥಿಗಳ ಮತ ಸೇರಿಸಿದರೂ ಒಟ್ಟು 60 ಸಾವಿರ ಮತಗಳು ಬಂದಿರುತ್ತವೆ‌. ಈ ಎಲ್ಲ ವಿಷಯಗಳನ್ನು ನೋಡಿದರೆ ಕೂಚಬಾಳ ಒಬ್ಬ ಅಸಮರ್ಥರಾಗಿದ್ದೀರಿ ಮತ್ತು ನಗರ ಶಾಸಕರ ಕೈಗೊಂಬೆಯಾಗಿದ್ದೀರಿ ಎಂದು ಆರೋಪಿಸಿದರು.

ಯತ್ನಾಳ ಹಿಟ್ಲರ್:
ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಬ್ಬ ಹಿಟ್ಲರ್. ಅಂಥವರ ಕೈಗೊಂಬೆಯಾಗಿ ಕೂಚಬಾಳ ಕೆಲಾ ಮಾಡುತ್ತಿದ್ದಾರೆ. ಯತ್ನಾಳ ಹಿಟ್ಲರ್ ಸಂಸ್ಕೃತಿ ಬೆಳೆಸಿಕೊಂಡು ಹೊರಟಿದ್ದಾರೆ ಎಂದರು ರವಿ ಬಗಲಿ ಆರೋಪಿಸಿದರು.

ಅದು ಹುಲಿಯೂ ಅಲ್ಲ, ಹೆಬ್ಬುಲಿಯೂ ಅಲ್ಲ ಅದೊಂದು ಹೆಂಡಿಯೊಳಗಿನ ಹುಳು. ಸಹಜವಾಗಿ ಹೆಂಡಿಯೊಳಗಿನ ಹುಳು ಉಂಡಿ ಮಾಡಿ ಉರುಳಿಸಿಕೊಂಡು ಹೋಗುತ್ತದೆ. ಹಾಗೆ ಯತ್ನಾಳ ಸಹ ಬಂಡಲ್ ಉಂಡಿ ಮಾಡಿ ಉರುಳಿಸಿಕೊಂಡು ಹೊರಟಿದೆ. ಅದು ಕರಗುವ ಕಾಲ ಬಂದಿದೆ. ಕರಗಿ ಹೋಗುತ್ತದೆ ಎಂದು ಹೀಯಾಳಿಸಿದರು.

ಎಸ್ ಸಿ ಮತ್ತು ಎಸ್ ಟಿ ವರ್ಗದ ಎಷ್ಟು ಜನರಿಗೆ ಗುತ್ತಿಗೆ ಕೊಟ್ಟಿದ್ದೀರಿ. ತಮ್ಮ ಹಿಂಬಾಲಕರಿಗೇ ಗುತ್ತಿಗೆ ಕೊಡುತ್ತಾರೆ. ಎಸ್ ಸಿ ಮತ್ತು ಎಸ್ ಟಿ ಹಿಂದು ಅಲ್ಲವಾ? ಎಂದು ರವಿಕಾಂತ ಪ್ರಶ್ನಿಸಿದರು.
ಅಷ್ಟೇ ಅಲ್ಲ ಬೇಡ ಜಂಗಮ ಸಮಾಜದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅಸಡ್ಡೆಯಾಗಿ ಉತ್ತರಿಸಿದ್ದೀರಿ….ಬೇಡ ಜಂಗಮರು ಹಿಂದೂಗಳಲ್ಲವಾ? ಪಂಚಮಸಾಲಿ 2 ಎ ಮೀಸಲಾತಿ ಬಗ್ಗೆ ಪ್ರಶ್ನೆ ಕೇಳುತ್ತೀರಿ ಎಂದ ಮೇಲೆ ಬೇಡ ಜಂಗಮರು ಕೂಡ ಹಿಂದೂಗಳೇ ಅಲ್ಲವೇ? ಎಂದರು.
ಇನ್ನು ಬಣಜಿಗ ಸಮಾಜ ಪಂಚಮಸಾಲಿ ಸಮಾಜದ ಸೋದರ ಸಮಾಜ.‌ ಯತ್ನಾಳರು ತಮ್ಮ ಸ್ವಾರ್ಥಕ್ಕಾಗಿ ಯಾರು ಯಾರಿಗೋ ಬೈಯುತ್ತಾರೆ. ಹಾಲುಮತ ಸಮಾಜಕ್ಕೆ ಕುರಿ ಸ್ವಾಭಿಮಾನದ ಸಂಕೇತ. ಅಂಥದರಲ್ಲಿ ಹುಲಿ ಕುರಿ ಹಿಂಡಿನೊಳಗೆ ಹೋಗಿದೆ ಎಂದು ವ್ಯಂಗ್ಯವಾಡುತ್ತಾರೆ. ಅವರೆಲ್ಲ ಕಾಯ್ಕೊಂಡು ಕೂತಿದ್ದಾರೆ ಎಂದರು.

ರಾಜು ಬಿರಾದಾರ, ಬಾಬು ಚವಾಣ್, ಬಸವರಾಜ ಹಳ್ಳಿ, ಅಭಿಷೇಕ ಸಾವಂತ, ಶಿವಾಜಿ ಪಾಟೀಲ, ಬಾಬು ಏಳಗಂಟಿ ಮತ್ತಿತರರಿದ್ದರು.

error: Content is protected !!