ಭೀಮಾತೀರದಲ್ಲಿ ಅಕ್ರಮ ಅಕ್ಕಿ ವಶ
ವಿಜಯಪುರ: ಅಕ್ರಮವಾಗಿ ವಾಹನದಲ್ಲಿ ಅಕ್ಕಿ ಸಾಗಾಟದ ವೇಳೆ ಪೊಲೀಸರು ಹಾಗೂ ಆಹಾರ ನಿರೀಕ್ಷಕ ಅಧಿಕಾರಿಗಳು ದಾಳಿಗೈದು ಅಕ್ಕಿ ಜಪ್ತಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೊಳೂರಗಿ ಗ್ರಾಮದ ಬಳಿ ನಡೆದಿದೆ. ಅಬೂಬಕರ್ ಲಾಲಸಾಬ್ ಜಮಾದಾರ ಬಂಧಿತ ಆರೋಪಿ. ಇನ್ನು ಬಂಧಿತ ಆರೋಪಿಯಿಂದ 16,153 ಮೌಲ್ಯದ 500 ಕೆಜಿ 57 ಗ್ರಾಂದ ರೇಷನ್ ಅಕ್ಕಿ, 50 ಸಾವಿರ ಮೌಲ್ಯದ ವಾಹನ, ಒಂದು ಮಷಿನ್ ವಶಕ್ಕೆ ತೆಗೆದುಕೊಂಡಿದ್ದಾರೆ. ಹೊರ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.