ವಿಜಯಪುರ

ಮಳೆಗಾಲದಲ್ಲೂ ತಪ್ಪದ ನೀರಿನ ಭವಣೆ, ತಾಲೂಕು ಪಂಚಾಯಿತಿ ಮುಂದೆ ಧರಣಿ ಕುಳಿತ ಗ್ರಾಮಸ್ಥರು

ಸರಕಾರ ನ್ಯೂಸ್ ಇಂಡಿ

ಮಳೆಗಾಲದಲ್ಲೂ ತಪ್ಪದ ನೀರಿಮ ಭವಣೆಯಿಂದಾಗಿ ಬೇಸತ್ತ ಗ್ರಾಮಸ್ಥರು ತಾಲೂಕು ಪಂಚಾಯಿತಿ ಎದುರು ಧರಣಿ ಕುಳಿತುಕೊಳ್ಳುವಂತಾಗಿದೆ.

ಇಂಡಿ ತಾಲೂಕಿಮ ತೆಗ್ಗಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಾದ ವ್ಯತ್ಯಯ ಸಾರ್ವಜನಿಕರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಸ್ಥಳೀಯ ಆಡಳಿತ ವ್ಯವಸ್ಥೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲದ ಕಾರಣ ತಾಲೂಕು ಪಂಚಾಯಿತಿ ಎದುರು ಧರಣಿ ಕುಳಿತುಕೊಂಡರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮನವಿ, ಪ್ರತಿಭಟನೆಗೂ ಜಗ್ಗದ ಕಾರಣ ನೂರಾರು ಮಹಿಳೆಯರು ತಾಲೂಕು ಪಂಚಾಯಿತಿಗೆ ಆಗಮಿಸಿ ಧರಣಿ ನಡೆಸಿದರು.

ಗ್ರಾಮಸ್ಥರಾದ ನಿಂಬೆವ್ವ ಭೀರನಹಳ್ಳಿ, ಯಲ್ಲವ್ವ ತಾಂಬೆ, ಅವ್ವಮ್ಮ ಕೋರೆ, ರಾಜಕ್ಕ ಕೋರೆ, ಕಸ್ತೂರಿ ಭೀರನಲ್ಲಿ
ರುಕ್ಮ ಕೋರೆ, ತಿಪ್ಪವ್ವ ಕೋರೆ, ಶಾಂತವ್ವ ಶಿರಾಶಾಡ ಮತ್ತಿತರರಿದ್ದರು.

error: Content is protected !!