ವಿಜಯಪುರ

ಚುನಾವಣೆಗೆ ಮುನ್ನವೇ ಭರವಸೆಗಳ ಮಹಾಪೂರ, ಉಚಿತ ಉಚಿತ ಎಲ್ಲವೂ ಉಚಿತ…ಕುಮಾರಸ್ವಾಮಿ ನೀಡಿದ ಭರವಸೆಗಳ ಪಟ್ಟಿ ನೋಡಿ…

ವಿಜಯಪುರ: ರಾಜ್ಯ ವಿಧಾನ ಸಭೆ ಚುನಾವಣೆಗೆ ಮುನ್ನವೇ ಜೆಡಿಎಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿತೆ?

ಹೌದು, ಆಲಮಟ್ಟಿಯಲ್ಲಿ ಶನಿವಾರ ನಡೆದ ಜನತಾ ಜಲಧಾರೆ ಸಂಕಲ್ಪ ಯಾತ್ರೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಬಿಚ್ಚಿಟ್ಟ ಜೆಡಿಎಸ್ ಕಾರ್ಯಕ್ರಮಗಳ ಪಟ್ಟಿ ಇಂಥದ್ದೊಂದು ಪ್ರಶ್ನೆ ಹುಟ್ಟು ಹಾಕಿತು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ರಾಜ್ಯದ ನೀರಾವರಿ ಯೋಜನೆ ಪೂರ್ಣಗೊಳ್ಳಲು 5 ವರ್ಷದಲ್ಲಿ 5 ಲಕ್ಷ ಕೋಟಿ ಹಣ ಬೇಕು. ಜೆಡಿಎಸ್ ಗೆ 5 ವರ್ಷ ಅಧಿಕಾರ ಕೊಟ್ಟರೆ, ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ. ಇಲ್ಲದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡಿ ರಾಜಕೀಯದಿಂದ ದೂರವಾಗುತ್ತೇನೆಂದು ಘೋಷಿಸಿದರು.
ಜಾತಿ ಆಧಾರದ ಮೇಲೆ ಮತ ಕೊಡುವುದನ್ನು ನಿಲ್ಲಿಸಿ
ಕೋಟ್ಯಂತರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಇಂಗ್ಲಿಷ್ ಮೀಡಿಯಂನ 1 ರಿಂದ 12ನೇ ತರಗತಿ ವರೆಗೆ ಪಬ್ಲಿಕ್ ಶಾಲೆ ತೆರೆಯುತ್ತೇನೆ. 5 ವರ್ಷದಲ್ಲಿ 6 ಸಾವಿರ ಗ್ರಾಪಂನಲ್ಲಿ ಉಚಿತ ಶಿಕ್ಷಣ ನೀಡುತ್ತೇನೆ. ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಆಕ್ಸಿಜನ್ ಬೆಡ್ ಗಳ ಆಸ್ಪತ್ರೆ ನಿರ್ಮಾಣ ಮಾಡುತ್ತೇನೆ ಎಂದರು.

ಪ್ರತಿದಿನ 30 ರಿಂದ 40 ಜನ ಸಹಾಯ ಯಾಚಿಸಿ ನನ್ನ ಮನೆಗೆ ಬರುತ್ತಾರೆ. ಆಸ್ಪತ್ರೆಗೆ ಸಹಾಯ ಮಾಡಿ ಅಂತಾ ಕೇಳುತ್ತಾರೆ.
ಬೇರೆ ನಾಯಕರ ಮನೆಗೆ ಹೋಗುವುದಿಲ್ಲ ಎಂದರು
ಸಾಲ ಮನ್ನಾ ಮಾಡುವುದರಿಂದ ರೈತರಿಗೆ ಒಳ್ಳೆಯದಾಗುವುದಿಲ್ಲ
ರೈತ ಸಾಲ ಮಾಡದ ಹಾಗೆಯೇ ಮಾಡುತ್ತೇನೆ. ನನ್ನ ಮೇಲೆ ನಿಮಗೆ ವಿಶ್ವಾಸವಿದ್ದರೆ, ಜೆಡಿಎಸ್ ಗೆ ಮತ ನೀಡುವ ನಿರ್ಧಾರ ಮಾಡಿ, ಒಮ್ಮೆ ನಮಗೆ ಆಶೀರ್ವಾದ ಮಾಡಿ ಎಂದು ಅಂಗಲಾಚಿದರು.
ನಿಮ್ಮ ಬದುಕನ್ನ ಕಟ್ಟಿಕೊಡುತ್ತೇನೆ ನನಗೆ ಒಂದು ಅವಕಾಶ ಕೊಟ್ಟು ನೋಡಿ, ತೀರ್ಮಾನ ನಿಮ್ಮದು ಎಂದರು.
ಶಾಸಕ ದೇವಾನಂದ ಚವಾಣ್, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಬಿ.ಡಿ. ಪಾಟೀಲ, ಸುನಿತಾ ಚವಾಣ್, ಮಂಗಳಾದೇವಿ ಬಿರಾದಾರ ಮತ್ತಿತರರಿದ್ದರು.

error: Content is protected !!