ನಮ್ಮ ವಿಜಯಪುರ

ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ, ಯಾಕೆ? ಏನಿದರ ಗುಟ್ಟು?

ಸರಕಾರ್‌ ನ್ಯೂಸ್‌ ವಿಜಯಪುರ

ಸಕ್ಕರೆ ಕಾರ್ಖಾನೆಗಳಲ್ಲಿ ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿರುವ ಆರೋಪದ ಮೇಲೆ ರಾಜ್ಯಾದ್ಯಂತ 21 ಸಕ್ಕರೆ ಕಾರ್ಖಾನೆಗಳ ಮೇಲೆ ಬುಧವಾರ ಏಕಾಏಕಿ ದಾಳಿ ನಡೆದಿದ್ದು, ಆ ಪೈಕಿ ವಿಜಯಪುರದ 5 ಕಾರ್ಖಾನೆಗಳ ಮೇಲೆ ದಾಳಿ ನಡೆದಿದೆ.

ಬುಧವಾರ ನಸುಕಿನ ಜಾವ 5ರಿಂದ 5.30ರ ಸಮಯದಲ್ಲಿ ಪೊಲೀಸ್‌ ಸಿಬ್ಬಂದಿ, ಆಹಾರ ಇಲಾಖೆ ಸಿಬ್ಬಂದಿ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕಾರಜೋಳದ ಬಸವೇಶ್ವರ ಕಾರ್ಖಾನೆ,  ಆಲಮೇಲದ ಕೆಪಿಆರ್‌, ಹಾವಿನಾಳದ ಇಂಡಿಯನ್‌ ಸಕ್ಕರೆ ಕಾರ್ಖಾನೆ ಹಾಗೂ ನಾದ ಕೆಡಿಯಲ್ಲಿರುವ ಜಮಖಂಡಿ ಶುಗರ್‌ ಘಟಕ-2ರ ಮೇಲೆ ದಾಳಿ ನಡೆದಿದೆ. ಬೇರೆ  ಬೇರೆ ಕಲ್ಲು ಹಾಗೂ ವೆಹಿಕಲ್‌ ತೂಕದಲ್ಲಿ ಇರಿಸಿ ವ್ಯತ್ಯಾಸ ಗಮನಿಸಲಾಗಿದೆ. ಆದರೆ, ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲಎಂದು ಅಧಿಕಾರಿಗಳು ತಿಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

 

error: Content is protected !!