ನಮ್ಮ ವಿಜಯಪುರ

ಪಾಲಿಕೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ, ಬಿಜೆಪಿ ಜಿಲ್ಲಾಧ್ಯಕ್ಷ ಕೂಚಬಾಳ ಹೇಳಿದ್ದೇನು?

ಸರಕಾರ್ ನ್ಯೂಸ್ ವಿಜಯಪುರ

ಐತಿಹಾಸಿಕ ವಿಜಯಪುರದ ಮಹಾನಗರ ಪಾಲಿಕೆ ಚುನಾವಣೆ ರಾಜ್ಯದ ಗಮನ ಸೆಳೆದಿದ್ದು, ಬಾರಿ ಬಿಜೆಪಿ ಸ್ಪಷ್ಟ ಬಹುಮತ ಸಿಗುವ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಹೇಳಿದರು.

ಅ.28 ರಂದು ನಡೆಯಲಿರುವ ಮತದಾನಕ್ಕೆ ಅತ್ಯಂತ ಹುರುಪಿನಿಂದ ಬಿಜೆಪಿ ಪರ ಹಕ್ಕು ಚಲಾಯಿಸಲು ಮತದಾರರು ಉತ್ಸುಕರಾಗಿದ್ದಾರೆ. ಕಳೆದೊಂದು ವಾರದಿಂದ ಪ್ರಚಾರ ಭರಾಟೆ ಜೋರಾಗಿದೆ. ಇದೀಗ ಬಹಿರಂಗ ಪ್ರಚಾರಕ್ಕೆ ಬಿದ್ದಿದ್ದು, ಈವರೆಗೂ ಭಾರತೀಯ ಜನತಾ ಪಕ್ಷದ
ಅಭ್ಯರ್ಥಿಗಳ ಪರವಾಗಿ ತೆರೆಗೆ ಮತಯಾಚಿಸಿದ್ದು ಈ ಬಾರಿಯ ಜನರ ಒಲವು ಬಿಜೆಪಿಯತ್ತ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಅಧಿಕಾರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ವಿಮಾನ ನಿಲ್ದಾಣ ಕಾಮಗಾರಿ, ರಸ್ತೆ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ತೋಟಗಾರಿಕೆ ಹೀಗೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದ್ದು ಜನರು ಕೊಂಡಾಡುತ್ತಿದ್ದಾರೆ. ಮತಯಾಚನೆಗೆ ಹೋದಾಗ ಜನರೇ ಅಭಿವೃದ್ಧಿಯ ಬಗ್ಗೆ ಕೊಂಡಾಡಿ ಅಭಿನಂದಿಸುತ್ತಿದ್ದಾರೆ ಎಂದು ಕೂಚಬಾಳ ಪ್ರಕಟಿಸಿದೆ.
ಎಸ್ ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಿಸಿರುವುದು ಸರ್ಕಾರದ ವರ್ಚಸ್ಸು ಇದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬೊಮ್ಮಾಯಿ ಅವರು ಸರ್ವಸಮಾಜಗಳಿಗೆ ನೀಡಿರುವ ಆದ್ಯತೆಯನ್ನು ಜನ ಗಮನಿಸಿದ್ದು, ಬಿಜೆಪಿ ಪರ ಅಲೆ ಹೆಚ್ಚಿಸಿದ್ದಾರೆ.
ಮತದಾರರು ಪ್ರಜ್ಞಾವಂತರು ರಾಜಕೀಯ ಬೆಳವಣಿಗೆಗಳ ಬಗ್ಗೆ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಏನೆಲ್ಲಾ ಮಾಡಿದೆ ಮತ್ತು ಇದೀಗ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಏನೆಲ್ಲಾ ಮಾಡುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಹಜವಾಗಿಯೇ ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸು ಗೆದ್ದಿವೆ ಎಂದು ಕೂಚಬಾಳ ಪ್ರಕಟಿಸಿದೆ.
ಬಿಜೆಪಿ ಧರ್ಮ, ಸಂಸ್ಕೃತಿ ಉಳಿಸುವ, ಅಭಿವೃದ್ಧಿ ಮಾಡುವ ಪಕ್ಷ ಎಂದು ಜನ ಅರಿತುಕೊಂಡಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ 33 ಹಾಗೂ 25 ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖಂಡರಾದ ಚಂದ್ರಶೇಖರ ಕವಟಗಿ, ಮಲ್ಲಿಕಾರ್ಜುನ ಜೋಗೂರ, ಬಸವರಾಜ ಬಿರಾದಾರ, ಸುರೇಶ ಬಿರಾದಾರ, ಉಮೇಶ ಕಾರಜೋಳ, ಪಾಪುಸಿಂಗ್ ರಾಜಪೂತ, ಕೃಷ್ಣಾ
ಗುನ್ಹಾಳಕರ, ಭರತ ಕೋಳಿ, ವಿಜಯ ಜೋಷಿ ಭಾಗವಹಿಸಿದ್ದರು.

error: Content is protected !!