ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ಜನ, ದೇವಸ್ಥಾನ- ಮನೆಗಳಿಗೆ ಕನ್ನ, ಕಳುವಾದ ಚಿನ್ನ- ಹಣ ಎಷ್ಟು ಗೊತ್ತಾ?
ಸರಕಾರ ನ್ಯೂಸ್ ಇಂಡಿ
ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದಿರುವ ಜನ ಹಣ ಹಾಗೂ ಚಿನ್ನಾಭರಣ ಕಳೆದುಕೊಂಡು ಕಣ್ಣೀರಾಗಿದ್ದಾರೆ !
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಕಳ್ಳತನ ನಡೆದಿದ್ದು ಬೆಳಗೆದ್ದು ನೋಡಿವಷ್ಟರಲ್ಲಿ ಕಳ್ಳರು ಗುಡಿಸಿ ಗುಂಡಾಂತರ ಮಾಡಿದ್ದಾರೆ.
ಗ್ರಾಮದ ಎರಡು ದೇವಸ್ಥಾನಗಳ ಬೀಗ ಮುರಿದ ಕಳ್ಳರು ಒಂದರಲ್ಲಿ ಕಳ್ಳತನ ನಡೆಸಿದ್ದು, ಮತ್ತೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಕರಿಯಸಿದ್ದೇಶ್ವರ ದೇವಸ್ಥಾನದಲ್ಲಿ ಬೀಗ ಮುರಿದು ಸುಮಾರು 20 ತೊಲಾ ಚಿನ್ನ ದೋಚಿದ್ದಾರೆ. ದೇವಸ್ಥಾನ ಹತ್ತಿರದ ಪರಶುರಾಮ ಬಂಗಾರಿ ಎಂಬುವವರ ಮನೆಯಲ್ಲಿದ್ದ ಹಣ ದೋಚಿದ್ದಾರೆ. ಕಬ್ಬಿನ ಬಿಲ್ ಪಡೆದು ತಂದಿಟ್ಟಿದ್ದ 80 ಸಾವಿರ ರೂಪಾಯಿ ದೋಚಿದ್ದಾರೆಂದು ತಿಳಿದು ಬಂದಿದೆ.
ಅಲ್ಲಿಯೇ ಹತ್ತಿರದಲ್ಲಿದ್ದ ಮತ್ತೊಂದು ಮನೆಯಲ್ಲೂ ಕಳ್ಳತನ ನಡೆಸಿದ್ದು ಕಳ್ಳತನವಾದ ಸಾಮಗ್ರಿ ಗಳ ವಿವರ ಲಭ್ಯವಾಗಿಲ್ಲ. ಇನ್ನು ಗ್ರಾಮದ ಹೊರಭಾಗಕ್ಕೆ ಅಂಟಿಕೊಂಡಿರುವ ಬೀರೇಶ್ವರ ದೇವಸ್ಥಾನದ ಬೀಗ ಮುರಿದಿದ್ದು, ಕಳ್ಳತನಕ್ಕೆ ಯತ್ನಿಸಿದ್ದಾರೆ.
ಬೆಳಗ್ಗೆ ಕರಿದೇವರ ಪೂಜೆಗೆಂದು ಬಂದ ಪೂಜಾರಿ ದೇವಸ್ಥಾನದ ಬೀಗ ಮುರಿದಿದ್ದು ಗಮನಿಸಿ ಒಳಹೊಕ್ಕು ನೋಡಿದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಒಂದೊಂದೇ ಕಳ್ಳತನದ ವಿವರ ಬಹಿರಂಗಗೊಂಡು ಜನ ತಮ್ಮ ತಮ್ಮ ಮನೆಯ ಸಾಮಾನು- ಸರಂಜಾಮು ಜಾಲಾಡಿ ತಮ್ಮ ಮನೆಯಲ್ಲೂ ಕಳ್ಳತನವೇನಾದರೂ ಆಗಿದೆಯಾ ಎಂದು ಪರಿಶೀಲಿಸುತ್ತಿದ್ದಾರೆ.
ಇಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)