ರಥದ ಚಕ್ರಕ್ಕೆ ಸಿಲುಕಿ ಇಬ್ಬರ ಸಾವು, ಪವಾಡ ಪುರುಷನ ಸನ್ನಿಧಿಯಲ್ಲಿ ಏನಿದು ಅವಾಂತರ?
ಸರಕಾರ ನ್ಯೂಸ್ ಇಂಡಿ
ಪವಾಡ ಪುರುಷ ಖ್ಯಾತಿಯ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಗ್ರಾನದಲ್ಲಿ ಕೆಲವು ದಿನಗಳ ಹಿಂದಷ್ಟೇ ಕೊಳವೆ ಬಾವಿಗೆ ಬಿದ್ದಿದ್ದ ಕಂದಮ್ಮ ಪವಾಡ ಸದೃಶವಾಗಿ ಬದುಕಿ ಬಂದ ಘಟನೆ ಇನ್ನೂ ಹಸಿ ಹಸಿಯಾಗಿದೆ !
ಅಷ್ವಾರಲ್ಲಾಗಲೇ ಮತ್ತೊಂದು ಅವಘಡ ಸಂಭವಿಸಿದ್ದು ಈ ಬಾರಿ ಇಬ್ಬರು ಬದುಕಿ ಉಳಿಯಲೇ ಇಲ್ಲ !
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸಿದ್ದಲಿಂಗ ಮಹಾರಾಜರ ಜಾತ್ರೋತ್ಸವ ಕಳೆಗಟ್ಟಿತ್ತು. ಕೊಳವೆ ಬಾವಿಗೆ ಬಿದ್ದ ಸಾತ್ವಿಕ್ ಮುಜಗೊಂಡನಿಗೆ ಸಿದ್ದಲಿಂಗನೆಂದು ಮರು ನಾಮಕರಣವೂ ಆಗಿತ್ತು.
ಭಾನುವಾರ ರಥೋತ್ಸವ ಅದ್ದೂರಿಯಾಗಿ ನಡೆಯಿತ್ತಿತ್ತು. ಇದ್ದಕ್ಕಿದ್ದಂತೆ ಇಬ್ಬರು ಯುವಕರು ರಥದ ಚಕ್ರಕ್ಕೆ ಸಿಲುಕಿದರು. ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದು, ಓರ್ವ ಗಾಯಗೊಂಡಿದ್ದಾನೆ.
ಶೋಭಾ ಮಹಾದೇವ ಶಿಂಧೆ (55) ಲಚ್ಚಣ ಗ್ರಾಮ ಮೃತಪಟ್ಟಿದ್ದು, ಬಂಡು ಕಟಕಧೋಂಡ (32) ಗಂಭೀರ ಗಾಯವಾಗಿದ್ದು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಇನ್ನೋರ್ವ ಮೃತನ ಹೆಸರು ಮತ್ತು ಊರು ತಿಳಿದು ಬಂದಿರುವುದಿಲ್ಲ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)