ಲಾಠಿಚಾರ್ಜ್ ಹಿನ್ನೆಲೆ ಸಿದ್ದರಾಮಯ್ಯ ಗೆ ಅವಹೇಳನ, ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ, ಎಫ್ ಐ ಆರ್ ದಾಖಲು
ವಿಜಯಪುರ: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಫೋಟೋಗೆ ಚಪ್ಪಲಿ ಹಾರ ಹಾಕಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿ ಯೋರ್ವನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಟೈಯರ್ ಗೆ ಬೆಂಕಿ ಹಚ್ಚಿ, ಬಸ್ ತಡೆದು ಪ್ರತಿಭಟನೆ ನಡೆಸಿದ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ದೇವರಹಿಪ್ಪರಗಿ ತಾಲೂಕಿನ ಬೋರಗಿ ಗ್ರಾಮದಲ್ಲಿ ಡಿ. 15 ರಂದು ಈ ಘಟನೆ ನಡೆದಿದ್ದು, ಈರಣ್ಣ ರಟಗಲ್ ಎಂಬಾತನ ಮೇಲೆ ದೂರು ದಾಖಲಿಸಲಾಗಿದೆ.
ಈತ ಸಿದ್ದರಾಮಯ್ಯ ಅವರ ಫೋಟೋದ ಮೇಲೆ ಚಪ್ಪಲಿ ಹಾಗೂ ಶೂಗಳನ್ನು ಇರುವ ಟ್ಯಾಪ್ ಟು ಎಂಟರ್ ಹಾಗೆ ಎಡಿಟ್ ಮಾಡಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಅಂಗವಾಗಿ ಇವತ್ತು ಶಾಂತಿಯುತವಾಗಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕುವಾಗ ಲಾಠಿ ಚಾರ್ಜ್ ಮಾಡಿಸಿದ ಕುರಿತ ವಿಷಯ ಇಟ್ಟುಕೊಂಡು ಅವಾಚ್ಯವಾಗಿ ಬರೆದು ಪೋಸ್ಟ್ ಮಾಡಿದ್ದನು.
ಇದನ್ನು ಖಂಡಿಸಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಆ ವ್ಯಕ್ತಿಯನ್ನು ಬಂಧಿಸಲು ಆಗ್ರಹಿಸಿ ರಸ್ತೆ ತಡೆದು, ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು.
ಹೀಗಾಗಿ ಪೋಸ್ಟ್ ಮಾಡಿದ
ಈರಣ್ಯ ಬಸವಂತರಾಯ ರಟಗಲ್ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.