ವಿಜಯಪುರ

ಗುಮ್ಮಟ ನಗರಿಗೆ ಒಕ್ಕರಿಸಿದ ಕರೊನಾ, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಡಿಸಿ ವಿಜಯಮಹಾಂತೇಶ

ವಿಜಯಪುರ: ಮಹಾಮಾರಿ ಕರೊನಾ ಮತ್ತೆ ಒಕ್ಕರಿಸಿಕೊಂಡಿದ್ದು ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆಸ್ಪತ್ರೆಗಳ ಸ್ಥಿತಿಗತಿ ಅವಲೋಕಿಸುತ್ತಿದ್ದಾರೆ.

ಶುಕ್ರವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯ, ರೋಗಿಗಳ ವಾರ್ಡ್ ಹಾಗೂ ಊಟದ ವ್ಯವಸ್ಥೆಗೆ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಎಚ್ಚರಿಸಿದರು.

ಜಿಲ್ಲೆಯಲ್ಲಿ ಕರೊನಾ ಹರಡುತ್ತಿದ್ದು ಈಗಿನಿಂದಲೇ ಕಟ್ಟೆಚ್ಚರ ವಹಿಸಬೇಕಿದೆ. ಏಪ್ರಿಲ್ 1 ರಿಂದ ಮೇ 3 ರವರೆಗೆ ಜಿಲ್ಲೆಯಲ್ಲಿ 14 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಬ್ಬ ಅಸುನೀಗಿದ್ದು, ಇನ್ನೂ 10 ಪ್ರಕರಣಗಳು ಸಕ್ರಿಯವಾಗಿವೆ. ಹೀಗಾಗಿ ಕರೊನಾ ಹರಡದಂತೆ ಮುಂಜಾಗೃತೆ ವಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಬಿಗ್ ಅಲರ್ಟ್ ಆಗಿದೆ.

error: Content is protected !!