ವಿಜಯಪುರ

ಪಾಲಿಕೆ ಉಪ ಆಯುಕ್ತರ ಮೇಲೆ ಆಕ್ರೋಶ, ಸರ್ಕಾರದ ಸುತ್ತೋಲೆ ಉಲ್ಲಂಘನೆ ಆರೋಪ, ಕೆಆರ್‌ಎಸ್ ಪಕ್ಷದಿಂದ ಜಿಲ್ಲಾಡಳಿತಕ್ಕೆ ದೂರು

ವಿಜಯಪುರ: ಮಹಾನಗರ ಪಾಲಿಕೆ ಉಪ ಆಯುಕ್ತರು ಸರ್ಕಾರದ ಸುತ್ತೋಲೆ ಉಲ್ಲಂಘಿಸಿದ್ದು ಈ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ ಮಾತನಾಡಿ, ಕೆಲವು ದಿನಗಳ ಹಿಂದೆ ಕೆಆರ್‌ಎಸ್ ಪಕ್ಷ ಮಹಾನಗರ ಪಾಲಿಕೆಯಲ್ಲಿ ಲಂಚಮುಕ್ತ ಅಭಿಯಾನ ನಡೆಸಿತ್ತು. ಆಗ ಉಪ ಆಯುಕ್ತರು ಪಕ್ಷದ ಕಾರ್ಯಕರ್ತರ ಮೇಲೆ ದರ್ಪ ಹಾಗೂ ದೌರ್ಜನ್ಯ ಮೆರೆದಿದ್ದರು. ಹೀಗಾಗಿ ಅವರ ಮೇಲೆ ಜಿಲ್ಲಾಡಳಿತಕ್ಕೆ ದೂರು ನೀಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ 2020ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ತಿಳಿಸಿದೆ. ತಾರತಮ್ಯ ಮಾಡದೆ ಬಂದವರಿಗೆ ಆಸನದಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದೆ. ಕರ್ತವ್ಯದ ವೇಳೆ ಅಧಿಕಾರಿ ಹಾಗೂ ಸಿಬ್ಬಂದಿ ಗುರುತಿನ ಚೀಟಿ ಕೊರಳಿಗೆ ಹಾಕಿಕೊಂಡಿರಬೇಕು. ಜೊತೆಗೆ ಟೇಬಲ್ ಮೇಲೆ ನಾಮಫಲಕ ಇರಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ, ವಿಜಯಪುರದ ಮಹಾನಗರ ಪಾಲಿಕೆಯಲ್ಲಿ ಈ ಸುತ್ತೋಲೆ ಪಾಲನೆಯಾಗುತ್ತಿಲ್ಲವೆಂದು ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ ತಿಳಿಸಿದರು.
ಪಕ್ಷದ ಮುಖಂಡರಾದ ಅಬ್ದುಲ್‌ಹಮೀದ್ ಇನಾಮದಾರ, ಪ್ರಕಾಶ ಮತ್ತಿತರರಿದ್ದರು.

error: Content is protected !!