ವಿಜಯಪುರ

ಬಸ್ ಸ್ಟೇರಿಂಗ್ ರಾಡ್ ಕಡಿತ, ಏಕಾಏಕಿ ಖೆಡ್ಡಾಗೆ ಇಳಿದ ಬಸ್…ಎಲ್ಲಿ? ಏನಾಯಿತು? ಹೇಗಾಯಿತು? ವಿವರಗಳಿಗಾಗಿ ಈ ವರದಿ ನೋಡಿ

ಸರ್ಕಾರ್ ನ್ಯೂಸ್ ಇಂಡಿ: ಸ್ಟೇರಿಂಗ್ ಕಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ ಆರ್ ಟಿಸಿ ಬಸ್ ರಸ್ತೆ ಪಕ್ಕದ ತಗ್ಗಿಗೆ ಮುಗುಚಿದ ಘಟನೆ ಭಾನುವಾರ ನಡೆದಿದೆ‌.

ಇಂಡಿ ತಾಲೂಕಿನ ನಾದ ಮತ್ತು ಶಿರಶ್ಯಾಡ ಮಧ್ಯೆ ಈ ಘಟನೆ ನಡೆದಿದೆ. ವಿಜಯಪುರದಿಂದ ಮಿರಗಿಗೆ ತೆರಳುತ್ತಿದ್ದ ಬಸ್ ಶಿರಶ್ಯಾಡ ದಾಟುತ್ತಿದ್ದಂತೆ ಸ್ಟೇರಿಂಗ್ ರಾಡ್ ಏಕಾಏಕಿ ಕಟ್ ಆಗಿದೆ. ಇದರಿಂದ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಖೆಡ್ಡಾಗೆ ಇಳಿದಿದೆ. ಬಸ್ ನಲ್ಲಿ ಒಟ್ಟು 11 ಜನ ಪ್ರಯಾಣಿಕರಿದ್ದು ಸುರಕ್ಷಿತವಾಗಿದ್ದಾರೆ. ಬಸ್ ಮುಂದಿನದ ಚೆಸ್ಸಿ ನುಜ್ಜುಗುಜ್ಜಾಗಿದೆ ಎಂದು ಸ್ಥಳೀಯರು ”ಸರ್ಕಾರ್ ವೆಬ್ ನ್ಯೂಸ್” ಗೆ ತಿಳಿಸಿದ್ದಾರೆ.

error: Content is protected !!