ಆರ್ ಎಸ್ ಎಸ್ ಬಗ್ಗೆ ಮಾಜಿ ಸಿಎಂ ಎಚ್ ಡಿಕೆ ಕಿಡಿ, ಧರ್ಮದ ಹೆಸರಿನಲ್ಲಿ ಗೊಂದಲ, ಸರ್ಕಾರದ ಸಂಪತ್ತು ಲೂಟಿ….!
ವಿಜಯಪುರ: ಆರ್ ಎಸ್ ಎಸ್ ಹುಟ್ಟುವ ಮುಂಚೆ ದೇಶದಲ್ಲಿ ಸಂಸ್ಕೃತಿಯೇ ಇರಲಿಲ್ಲವಾ? ಜನರು ಸಂಸ್ಕೃತಿಯನ್ನೇ ಉಳಿಸಿರಲಿಲ್ಲವಾ? ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಆರ್ ಎಸ್ ಎಸ್ ವಿರುದ್ಧ ಕಿಡಿ ಕಾರಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಭಾನುವಾರ ವಿಜಯಪುರದಲ್ಲಿ ಪ್ರಚಾರ ನಡೆಸಿದ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಆರ್‌ಎಸ್ಎಸ್ ನವರು ಯಾವ ಸಂಸ್ಕೃತಿ ಉಳಿಸುತ್ತಿದ್ದಾರೆ? ಧರ್ಮದಲ್ಲಿ ಹೆಸರಿನಲ್ಲಿ ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದ ಅವರು, ಇವರಿಂದ ನಾವು ಸಂಸ್ಕೃತಿ ಕಲಿಯಬೇಕಿಲ್ಲ ಎಂದರು.
ಇನ್ನು ಸರ್ಕಾರ ನಡೆಸುವವರು ಕೈಯಿಂದ ಬಾಚುತ್ತಿಲ್ಲ. ಸರ್ಕಾರದ ಸಂಪತ್ತು ಲೂಟಿ ಮಾಡುತ್ತಿದ್ದಾರೆ. ಹಿಟಾಚಿಯಿಂದ ಸರ್ಕಾರದ ಸಂಪತ್ತನ್ನು ಬಗೆಯುತ್ತಿದ್ದಾರೆ. ಇದು ಆರ್‌ಎಸ್ಎಸ್ ಸಂಸ್ಕೃತಿ ನಾ? ಎಂದು ಕಿಡಿಕಾರಿದರು.