ಮೋದಿಗಾಗಿ ಬ್ಯಾರಿಕೇಡ್ ಬಳಿ ನಿಂತ ನಾಯಕರ ಟ್ರೋಲ್, ಬಿಜೆಪಿ ಶಾಸಕ ಯತ್ನಾಳ ತಿರುಗೇಟು, ಪ್ರಧಾನಿ ಬಂದಿದ್ದು ಪ್ರಚಾರಕ್ಕಲ್ಲ….!
ಸರಕಾರ ನ್ಯೂಸ್ ವಿಜಯಪುರ
ಚಂದಿರನ ಅಂಗಳದಲ್ಲಿ ಭಾರತದ ಬ್ಯಾಹ್ಯಾಕಾಶ ನೌಕೆ ವಿಕ್ರಮ ಸಾಫ್ಟ್ ಲ್ಯಾಂಡಿಂಗ್ ಮೂಲಕ ಸಾಧನೆ ಮೆರೆಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳ ಸಾಧನೆ ಕೊಂಡಾಡಿದ್ದಾರೆ. ಮಾತ್ರವಲ್ಲ, ಅವರನ್ನು ಅಭಿನಂದಿಸಲು ವಿದೇಶದಿಂದ ಏಕಾಏಕಿ ಆಗಮಿಸಿದರು.
ಆದರೆ, ಈ ವೇಳೆ ಬಿಜೆಪಿಯ ರಾಜ್ಯ ನಾಯಕರು ಮೋದಿ ಅವರನ್ನು ಕಾಣಲು ರಸ್ತೆ ಬದಿ, ಬ್ಯಾರಿಕೇಡ್ ಬಳಸಿ ನಿಂತಿರುವುದು ಸಾಕಷ್ಟು ಟ್ರೋಲ್ ಆಗಿತ್ತು.
ಈ ಟ್ರೋಲ್‌ಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಪಕ್ಷದ ಪ್ರಚಾರಕ್ಕೆ ಬಂದಿಲ್ಲ. ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳನ್ನು ಅಭಿನಂದಿಸಲು ಬಂದಿದ್ದಾರೆ. ಹೀಗಾಗಿ ಪಕ್ಷದ ನಾಯಕರು ಸಾಮಾನ್ಯ ಕಾರ್ಯಕರ್ತರಂತೆ ಮೋದಿ ಅವರನ್ನು ಕಾಣಲು ಹೋಗಿದ್ದಾರಷ್ಟೆ. ಅದರಲ್ಲಿ ಅವಮಾನ ಎಂಥದ್ದು? ಎಂದು ಶಾಸಕ ತಿರುಗೇಟು ನೀಡಿದ್ದಾರೆ.
ಸೋಮವಾರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಪ್ರಧಾನಮಂತ್ರಿ ಜನೌಷಧ ಕೇಂದ್ರ ಹಾಗೂ ಶ್ರೀ ಸಿದ್ಧೇಶ್ವರ ಆಟೋ ನಿಲ್ದಾಣ ಕೇಂದ್ರಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರೇ ಯಾವುದೇ ಶಿಷ್ಟಾಚಾರ ಬೇಡವೆಂದಿದ್ದಾರೆ. ಮುಖ್ಯಮಂತ್ರಿಯನ್ನು, ರಾಜ್ಯಪಾಲರನ್ನು ಸಹ ಕರೆದಿಲ್ಲ. ಕೇವಲ ವಿಜ್ಞಾನಿಗಳಿಗೆ ಗೌರವ ಕೊಡಲು ಪ್ರಧಾನಿ ಬಂದಿದ್ದಾರೆ. ಹೀಗಾಗಿ ಅವರನ್ನು ಟ್ರೋಲ್ ಮಾಡಿ ಅಪಮಾನಿಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)