ವಿಜಯಪುರ

ಅನೈತಿಕ ಸಂಬಂಧಕ್ಕೆ ಅಡ್ಡಿ, ಗಂಡನನ್ನೆ ಕೊಲೆಗೈದ ಪತ್ನಿ- ಪ್ರಿಯಕರ ಅರೆಸ್ಟ್….!

ಸರಕಾರ ನ್ಯೂಸ್ ವಿಜಯಪುರ

ಅನೈತಿಕ ಸಂಬಂಧ ಹಿನ್ನೆಲೆ ಗಂಡನನ್ನೇ ಕೊಲೆ ಮಾಡಿಸಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಬಸವನಬಾಗೇವಾಡಿಯ ಗಣೇಶ ನಗರ ನಿವಾಸಿ ಡೋಂಗ್ರಿಸಾಬ(38) ಹಾಗೂ ಜಯಶ್ರೀ ಜಕರಾಯ ದಳವಾಯಿ (34) ಬಂಧಿತ ಆರೋಪಿಗಳು.

ಘಟನೆ ವಿವರ:

ಆರೋಪಿತ ಜಯಶ್ರೀ ಹೆಗಡಿಹಾಳ ಗ್ರಾಮದ ಜಕರಾಯ ದಳವಾಯಿ ಎಂಬಾತನೊಂದಿಗೆ ಮದುವೆಯಾಗಿದ್ದಳು. ಜಯಶ್ರೀ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಹೀಗೆ ಅಡುಗೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಇದ್ದ ಡೊಂಗ್ರಿಸಾಬನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಳು. ಇದನ್ನು ಅರಿತ ಜಕರಾಯ ಆತನೊಂದಿಗಿನ ಅನೈತಿಕ ಸಂಬಂಧ ತೊರೆಯುವಂತೆ ಒತ್ತಾಯಿಸಿದ್ದನಲ್ಲದೇ ಮಕ್ಕಳನ್ನು ಕರೆದುಕೊಂಡು ಬಸವನಬಾಗೇವಾಡಿಯಿಂದ ತನ್ನೂರಾದ ಹೆಗಡಿಹಾಳಕ್ಕೆ ಹೋಗಿದ್ದನು. ಅದೊಂದು ದಿನ ಹೆಂಡತಿಯನ್ನು ಕಾಣಲು ಬಸವನಬಾಗೇವಾಡಿಗೆ ಬಂದಾಗ ಜಯಶ್ರೀ ಡೊಂಗ್ರಿಸಾಬ್ ಗೆ ವಿಷಯ ತಿಳಿಸಿದ್ದಾಳೆ. ಆಗ ಡೊಂಗ್ರಿಸಾಬ್ ಮನೆಗೆ ಬಂದಿದ್ದು ಜಕರಾಯನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಸಾಕ್ಷಿ ನಾಶಪಡಿಸಲೆಂದು ಜಕರಾಯನ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಮೋಟರ್ ಸೈಕಲ್ ಮೇಲೆ ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿ ಸುಟ್ಟಿದ್ದಾನೆ.

ಬಳಿಕ ಜಕರಾಯನ ತಂದೆ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕೆಲ ದಿನಗಳ ಬಳಿಕ ಜಕರಾಯನ ತಂದೆ ಜಯಶ್ರೀ ಬಳಿ ಹೋದಾಗ ಸತ್ಯಾಂಶ ಬಾಯಿ ಬಿಟ್ಟಿದ್ದಾಳೆ. ಆಗ ಮತ್ತೆ ಪ್ರಕರಣ ದಾಖಲಿಸಲಾಗಿ ಪೊಲೀಸರು ಇಬ್ಬರನ್ನೂ ಕರೆ ತಂದು ವಿಚಾರಣೆ ನಡೆಸಲಾಗಿ ನಿಜಾಂಶ ಬಯಲಾಗಿದೆ.

ಪ್ರಕರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಸ್ ಪಿ ಎಚ್.ಡಿ. ಆನಂದಕುಮಾರ ವಿಶೇಷ ತಂಡ ರಚಿಸಿದ್ದರು. ಇದೀಗ ಚುರುಕಿನ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿದ ಹಿನ್ನೆಲೆ ಅವರ ಕಾರ್ಯ ಶ್ಲಾಘಿಸಲಾಗಿದೆ.

error: Content is protected !!