ಮಧ್ಯಪ್ರದೇಶದಿಂದ ಪಿಸ್ತೂಲ್ ಖರೀದಿಸಿ ಮಾರಾಟ, ಆರೋಪಿಗಳನ್ನು ಹೆಡೆಮುರಿ ಕಟ್ಟಿ ತಂದ ಖಾಕಿ ಪಡೆ, ಹೆಚ್ಚಿನ ವಿವರ ಇಲ್ಲಿದೆ ನೋಡಿ….
ಸರಕಾರ್ ನ್ಯೂಸ್ ವಿಜಯಪುರ
ಮಧ್ಯಪ್ರದೇಶದಿಂದ ಅಕ್ರಮವಾಗಿ ಕಂಟ್ರಿಪಿಸ್ತೂಲ್ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿ ತಂದಿದ್ದಾರೆ.
ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿರುವ ಪೊಲೀಸರು ನಾಲ್ಕು ಪಿಸ್ತೂಲ್, ಐದು ಜೀವಂತ ಗುಂಡು ಹಾಗೂ ಮಚ್ ಮತ್ತಿತರರ ಅಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಜಮಖಂಡಿ ರಸ್ತೆಯಲ್ಲಿ ಅನುಮಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಕಿರಣ ರಮೇಶ ರೂಗಿ ಹಾಗೂ ಕಿರಣ ದಾನಪ್ಪ ಗಾಯಕವಾಡನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿ, ಇವರಿಂದ 3 ಪಿಸ್ತೂಲ್, 4 ಜೀವಂತ ಗುಂಡು ಸಿಕ್ಕಿವೆ. ಇವುಗಳನ್ನು ಮಧ್ಯ ಪ್ರದೇಶದಿಂದ ತರಿಸಿಕೊಂಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕಂಟ್ರಿ ಪಿಸ್ತೂಲ್, ಒಂದು ಜೀವಂತ ಗುಂಡು ಇರಿಸಿಕೊಂಡಿದ್ದ ಇಬ್ಬರನ್ನು ವಶಕ್ಕೆ ಬಂಧಿಸಲಾಗಿದೆ. ಸುರೇಶ ಲಕ್ಷ್ಮಣ ರಾಠೋಡ, ವಿಜಯ ಊರ್ಫ್ ಪಿಂಟೂ ಲಕ್ಷ್ಮಣ ರಾಠೋಡ ಬಂಧಿತರು. ಇವರಿಂದ ಒಂದು ಕಾರು, ಒಂದು ಲಾಂಗ್ ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಎಚ್.ಡಿ. ಆನಂದಕುಮಾರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣವನ್ನು ಭೇದಿಸಿದ ಡಿವೈಎಸ್‌ಪಿ ಸಿದ್ಧೇಶ್ವರ ನೇತೃತ್ವದ ತಂಡಕ್ಕೆ ಅಭಿನಂದಿಸಿದರು. ಎಎಸ್‌ಪಿ ಡಾ.ರಾಮ ಅರಸಿದ್ದಿ ಇದ್ದರು.