ನಮ್ಮ ವಿಜಯಪುರ

ಗುಮ್ಮಟ ನಗರಿಯಲ್ಲಿ ಹೆಚ್ಚಿದ ಮಕ್ಕಳ ಕಳ್ಳರ ಹಾವಳಿ, ಬೆಚ್ಚಿ ಬಿದ್ದ ಬಾಲಕ, ಸ್ವಲ್ಪದರಲ್ಲೇ ಬಚಾವ್!

ಸರಕಾರ್ ನ್ಯೂಸ ವಿಜಯಪುರ

ಗುಮ್ಮಟ ನಗರಿಯಲ್ಲಿ ಮಕ್ಕಳ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಬುಧವಾರ ಬೆಳಗ್ಗೆ ಬಾಲಕನೋರ್ವ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾನೆ !

ಹೌದು, ಇಲ್ಲಿನ ಚಾಂದನಿ ಹಾಲ್ ಬಳಿ ಬೆಳಗ್ಗೆ ಅಂಗಡಿಗೆ ಪೆನ್ ತರಲೆಂದು ತೆರಳಿದ್ದ ಬಾಲಕನನ್ನು ಒಬ್ಬ ವ್ಯಕ್ತಿ ಮತ್ತು ಅವನೊಂದಿಗಿದ್ದ ಮಹಿಳೆ ಚಾಕೊಲೇಟ್ ಕೊಡುವುದಾಗಿ ಫುಸಲಾಯಿಸಿ ಕರೆದೊಯ್ದಿದ್ದಾರೆ. ಶಹಾಪೇಟಿ ಬಳಿ ತೆರಳುತ್ತಿದ್ದಂತೆ ಅನುಮಾನಗೊಂಡ ಬಾಲಕ ಕೈಬಿಡಿಸಿಕೊಂಡು ಓಡಿ ಬಂದಿದ್ದಾನೆ.

ಅಂದ ಹಾಗೆ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಬಾಲಕನ ಹೆಸರು ಭಾಸ್ಕರ್ ಗಂಗಾಧರ ಶಿರನಾಳ. ಸ್ಥಳೀಯ ನಿವಾಸಿಯಾಗಿರುವ ಈತ ಅಪಹರಣಕಾರರ ಬಗ್ಗೆ ಮನೆಯವರೆಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಪಾಲಕರು ಬೆನ್ನಟ್ಟಲಾಗಿ ಅಪಹರಣಕಾರರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಗಾಂಧಿಚೌಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

error: Content is protected !!