ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ, 40 ಸಾವಿರ ರೂ.ಮೌಲ್ಯದ 950 ಕೆಜಿ ಗಾಂಜಾ ವಶ, ಎಲ್ಲಿ? ಯಾವಾಗ ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು ಅಂದಾಜು 40 ಸಾವಿರ ರೂ.ಮೌಲ್ಯದ 950 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಇಂಡಿ ವಲಯದ ರೂಗಿ-ಅಥರ್ಗಾ ಮಾರ್ಗದಲ್ಲಿರುವ ಪೀರಾಪುರ ದರ್ಗಾ ಹತ್ತಿರ ಮಂಗಳವಾರ ದಾಳಿ ನಡೆಸಿದ ಅಬಕಾರಿ ಪೊಲೀಸರು ಆರೋಪಿ ಸೋಮನಿಂಗ ಅಣ್ಣಪ್ಪ ಗುಡಿ ಎಂಬುವನನ್ನು ಬಂಧಿಸಿದ್ದಾರೆ. ಇವನು ತನ್ನ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ.
ಅಬಕಾರ ಅಪರ ಆಯುಕ್ತ ಡಾ.ವೈ.ಮಂಜುನಾಥ, ಜಂಟಿ ಆಯುಕ್ತ ಫಿರೋಜಖಾನ ಖಿಲ್ಲೇದಾರ ಹಾಗೂ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಎಲ್.ಎಸ್. ಸಲಗರೆ ನೇತೃತ್ವದ ತಂಡ ದಾಳಿ ನಡೆಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.