ಮಕ್ಕಳ ಕಳ್ಳರ ವದಂತಿ, ಅಪರಿಚಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ, ಎಲ್ಲಿ? ಏನಾಯ್ತು ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ಮಕ್ಕಳ ಕಳ್ಳನೆಂದು ತಿಳಿದು ಅಪರಿಚಿತ ಯುವಕನನ್ನು ಹಿಎಇದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಸೋಮವಾರ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಯುವಕನನ್ನು ಹಿಡಿದ ಗ್ರಾಮಸ್ಥರು ಆತನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ತಲೆ ತುಂಬ ಕೆಂಪು ಬಿಳಿ ಮಿಶ್ರಿತ ಉದ್ದನೆಯ ಕೂದಲು ಬಿಟ್ಟುಕೊಂಡು, ಹಳೇ ಬಟ್ಟೆ ತೊಟ್ಟು ಸಂಚರಿಸುತ್ತಿದ್ದ ವ್ಯಕ್ತಿ ವಿಚಿತ್ರವಾಗಿ ಕಾಣುತ್ತಿದ್ದನಲ್ಲದೇ ಹಿಂದಿ ಭಾಷಿಕನಾದ್ದರಿಂದ ಗ್ರಾಮಸ್ಥರಲ್ಲಿ ಅನುಮಾನ ಹೆಚ್ಚಾಗಿದೆ. ಅಲ್ಲದೇ ಶಾಲೆ ಮಕ್ಕಳೊಂದಿಗೆ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಗಮನಿಸಿ ಆತನನ್ನು ಹಿಡಿದು ವಿಚಾರಿಸಿದ್ದಾರೆ. ಆದರೆ ಕನ್ನಡ ಭಾರದ ಆ ಯುವಕ ಸಮರ್ಪಕವಾಗಿ ಉತ್ತರಿಸಲಾಗದ ಕಾರಣ ಅನುಮಾನಗೊಂಡ ಗ್ರಾಮಸ್ಥರು ಆತನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ.
ಸುದ್ದಿ ತಿಳಿದ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.